ಪ್ರಭಾಸ್ ಎದುರಾಗಿ ನಿಲ್ಲಲಿದ್ದಾರೆ ಉಳುಗ ನಾಯಗನ್ ಕಮಲ್ ಹಾಸನ್

Public TV
2 Min Read

ಪ್ರಭಾಸ್ (Prabhas) ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್ ‘ಪ್ರಾಜೆಕ್ಟ್ ಕೆ’ (Project K) ಸಿನಿಮಾದಲ್ಲಿ ತಮಿಳಿನ ಹೆಸರಾಂತ ನಟ ಕಮಲ್ ಹಾಸನ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈವರೆಗೂ ಅದರ ಕುರಿತು ಚಿತ್ರತಂಡವಾಗಲಿ, ನಿರ್ಮಾಣ ಸಂಸ್ಥೆಯಾಗಲಿ ಅಧಿಕೃತವಾಗಿ ಹೇಳಿಕೆ ನೀಡಿರಲಿಲ್ಲ. ಇದೀಗ ಕಮಲ್ ಹಾಸನ್ ಆ ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಅಧಿಕೃತ ಮಾಹಿತಿಯೇ ಹೊರ ಬಿದ್ದಿದೆ.

ಪ್ರಾಜೆಕ್ಟ್ ಕೆ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರ ಬಿದ್ದಿದ್ದು, ‘ಇವರು ಲೆಜೆಂಡ್. ಈ ಪಾತ್ರವು ಯಾರನ್ನು ನಿರೀಕ್ಷೆ ಮಾಡುತ್ತಿತ್ತೋ ಅವರು ನಮಗೆ ಸಿಕ್ಕಿದ್ದಾರೆ. ಕಮಲ್ ಹಾಸನ್ (Kamal Haasan) ಅವರಿಂದ ನಾನು ಸಾಕಷ್ಟು ಕಲಿಯಬಹುದು. ಆ ಕ್ಷಣಕ್ಕಾಗಿ ನಾನಂತೂ ಕಾಯುತ್ತಿದ್ದೇನೆ’ ಎಂದು ನಿರ್ದೇಶಕ ನಾಗ್ ಅಶ್ವಿನ್ (Nag Ashwin) ಹೇಳಿಕೊಂಡಿದ್ದಾರೆ.

ಒಂದು ಕಡೆ ಕಮಲ್ ಹಾಸನ್ ರಂಥ ದಿಗ್ಗಜರು ಈ ಸಿನಿಮಾದಲ್ಲಿದ್ದರೆ ಮತ್ತೊಂದು ಕಡೆ ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಕೂಡ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. `ಪಠಾಣ್’ (Pathaan) ಚಿತ್ರದ ಸೂಪರ್ ಸಕ್ಸಸ್‌ ನಂತರ ದೀಪಿಕಾ ಅವರು ಪ್ರಭಾಸ್ ಜೊತೆ `ಪ್ರಾಜೆಕ್ಟ್ ಕೆ’ ಸಿನಿಮಾದಲ್ಲಿ ನಟಿಸುವುದಕ್ಕಾಗಿ ಭರ್ಜರಿ ಸಂಭಾವನೆ ಪಡೆದಿದ್ದಾರೆ.

ಐಶ್ವರ್ಯಾ’ (Aishwarya Kannada Film) ಸಿನಿಮಾ ಮೂಲಕ ರಿಯಲ್ ಸ್ಟಾರ್ ಉಪ್ಪಿಗೆ (Upendra)  ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟರು. ಬಳಿಕ ಶಾರುಖ್ ಖಾನ್‌ಗೆ (Sharukh Khan) ನಾಯಕಿಯಾಗಿ `ಓಂ ಶಾಂತಿ ಓಂ’ ಚಿತ್ರದಿಂದ ಬಾಲಿವುಡ್‌ಗೆ ಲಗ್ಗೆ ಇಟ್ಟರು. ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡು ಸೈ ಎನಿಸಿಕೊಂಡಿದ್ದಾರೆ.

K Project

ಈ ವರ್ಷ `ಪಠಾಣ್’ ಚಿತ್ರದ ಮೂಲಕ ಭರ್ಜರಿ ಓಪನಿಂಗ್ಸ್ ಪಡೆದಿದ್ದಾರೆ. ಶಾರುಖ್ ನಾಯಕಿಯಾಗಿ ದೀಪಿಕಾ ಮಿಂಚಿದ್ದಾರೆ. ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ ತಮ್ಮ ಮುಂದಿನ ಸಿನಿಮಾ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.

 

ಈ ಸಿನಿಮಾಗಾಗಿ ಅವರು ದೊಡ್ಡ ಕಾಲ್‌ಶೀಟ್ ನೀಡಿದ್ದಾರೆ. ಹಲವು ದಿನಗಳನ್ನ ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ನಾಗ್ ಅಶ್ವೀನ್ ನಿರ್ದೇಶನದ ಈ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಕೆಲ ಸ್ಟಾರ್ ಹೀರೋಗಳು ಕೂಡ ಇಷ್ಟು ಸಂಭಾವನೆ ಪಡೆಯಲ್ಲ ಅನ್ನೋದು ಗಮಿನಿಸಬೇಕಾದ ವಿಷಯ. ಪ್ರಭಾಸ್ ಜೊತೆಗಿನ ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಭಾರೀ ತಾರಾಗಣದ ಕಾರಣದಿಂದಾಗಿ ಸಿನಿಮಾ ಕುತೂಹಲ ಮೂಡಿಸಿದೆ.

Share This Article