Ulajh Teaser: ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್

Public TV
1 Min Read

ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಸದಾ ಸಿಂಪಲ್ ಅಥವಾ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಜಾನ್ವಿ ಸೈ ಎನಿಸಿಕೊಂಡಿದ್ದಾರೆ. ಇದೀಗ ‘ಉಲಾಜ್’ (Ulajh Film) ಚಿತ್ರದ ಟೀಸರ್‌ನಿಂದ ಶ್ರೀದೇವಿ ಪುತ್ರಿ ಗಮನ ಸೆಳೆದಿದ್ದಾರೆ.

ವಿದೇಶ ನೆಲದಲ್ಲಿ ದೇಶಭಕ್ತಿ ಮೆರೆಯುವ ಪಾತ್ರದಲ್ಲಿ ನಟಿಸಿದ್ದಾರೆ. ಉಲಾಜ್ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ವಿದೇಶಾಂಗ ಸೇವೆಗಳ ರೋಚಕ ಜಗತ್ತಿನ ಬಗ್ಗೆ ತೋರಿಸಲಾಗಿದೆ. ದೇಶಭಕ್ತರ ಕುಟುಂಬದಿಂದ ಬಂದ ಸುಹಾನಾ ಪಾತ್ರದಲ್ಲಿ ಜಾನ್ವಿ ನಟಿಸಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ನಟನೆಯ ‘ಇಂಡಿಯನ್‌ 2’ ಸಿನಿಮಾದಲ್ಲಿ ಸಿದ್ಧಾರ್ಥ್

 

View this post on Instagram

 

A post shared by Janhvi Kapoor (@janhvikapoor)


ನಾಯಕಿ ಸುಹಾನಾ ವಿದೇಶದಲ್ಲಿ ಕೆಲಸ ಮಾಡುವಾಗ ಜೀವ ಬೆದರಿಕೆಗೆ ಒಳಗಾಗುತ್ತಾರೆ. ತನ್ನ ರಾಷ್ಟ್ರವನ್ನು ರಕ್ಷಿಸಲು ಮೋಸದ ಜಾಲವನ್ನು ಭೇದಿಸುವ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಎದುರಾಗುವ ಅಪಾಯ ಮತ್ತು ಸವಾಲುಗಳ ತುಣುಕನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ರಾಜತಾಂತ್ರಿಕ ಪಾತ್ರಕ್ಕೆ ಜಾನ್ವಿ ಜೀವ ತುಂಬಿದ್ದಾರೆ. ಈ ಚಿತ್ರವನ್ನು ಸುಧಾಂಶು ಸರಿಯಾ ನಿರ್ದೇಶನ ಮಾಡಿದ್ದಾರೆ. ಇದೇ ಜುಲೈ 5ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

ಬಾಲಿವುಡ್ ಮತ್ತು ತೆಲುಗಿನಲ್ಲಿ ಬ್ಯುಸಿಯಾಗಿರುವ ಜಾನ್ವಿ ಕಪೂರ್ (Janhavi Kapoor) ಇದೀಗ ‘ಉಲಾಜ್’ ಟೀಸರ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ನೀವು ಕೂಡ ನಿಮ್ಮ ಅಮ್ಮನ ಹಾಗೆ ಎತ್ತರಕ್ಕೆ ಬೆಳೆಯುತ್ತೀರಾ ಎಂದು ಶುಭಹಾರೈಸುತ್ತಿದ್ದಾರೆ ಫ್ಯಾನ್ಸ್.

Share This Article