ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ರಾಜೀನಾಮೆ

Public TV
1 Min Read

ಕೀವ್: ರಷ್ಯಾ ವಿರುದ್ಧದ ಯುದ್ಧದ ನಡುವೆ ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ರಾಜೀನಾಮೆ ನೀಡಿದ್ದಾರೆ.

ಉಕ್ರೇನ್ ಮೇಲಿನ ಯುದ್ಧ 50 ದಿನಗಳಲ್ಲಿ ಪರಿಹರಿಸದಿದ್ದರೆ, ಮಾಸ್ಕೋದ ಉಳಿದ ವ್ಯಾಪಾರ ಪಾಲುದಾರರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಉಕ್ರೇನಿಯನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಮಂಗಳವಾರ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದಾಗಿ ಹೇಳಿದ್ದಾರೆ. ಈ ವಾರದ ಕೊನೆಯಲ್ಲಿ ನಡೆಯಲಿರುವ ಪ್ರಮುಖ ಸರ್ಕಾರಿ ಪುನರ್ರಚನೆಗೆ ಇದು ನಾಂದಿ ಹಾಡಿದೆ.

ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್‌ನ ನಾಯಕತ್ವದ ತಂಡದಲ್ಲಿ ವ್ಯಾಪಕವಾದ ಬದಲಾವಣೆಯನ್ನು ಪ್ರಸ್ತಾಪಿಸಿದ ಒಂದು ದಿನದ ನಂತರ ಈ ಘೋಷಣೆ ಬಂದಿದೆ. ಶ್ಮಿಹಾಲ್ ಅವರ ನಂತರ ಪ್ರಧಾನಿಯಾಗಿ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಆರ್ಥಿಕ ಸಚಿವೆ ಯೂಲಿಯಾ ಸ್ವೈರಿಡೆಂಕೊ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

2020ರ ಮಾರ್ಚ್ನಲ್ಲಿ ಪ್ರಧಾನಿ ಹುದ್ದೆಯನ್ನು ಶ್ಮಿಹಾಲ್ ಅಲಂಕರಿಸಿದ್ದರು. 1991 ರಲ್ಲಿ ದೇಶದ ಸ್ವಾತಂತ್ರ‍್ಯದ ನಂತರ ಉಕ್ರೇನ್‌ನಲ್ಲಿ ಅತಿ ಹೆಚ್ಚು ಕಾಲ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

Share This Article