ಮಾಸ್ಕೋ: ಉಕ್ರೇನ್ (Ukraine) ನೌಕಾಪಡೆಯ ಗಸ್ತು ಹಡಗನ್ನು ರಷ್ಯಾ (Russia) ಡ್ರೋನ್ ದಾಳಿ (Drone Attack) ನಡೆಸಿ ಮುಳುಗಿಸಿದೆ.
ಉಕ್ರೇನ್ ದೊಡ್ಡ ಗಸ್ತು ಹಡಗು ಸಿಮ್ಫೆರೊಪೋಲ್ (Simferopol) ಡ್ಯಾನ್ಯೂಬ್ ನದಿಯಲ್ಲಿ ಸಂಚರಿಸುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ರಷ್ಯಾ ಹೇಳಿದೆ. ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್‌ಗಳನ್ನು ಈ ಹಡಗು ಹೊಂದಿತ್ತು.
ದಾಳಿಯಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ಹೆಚ್ಚಿನ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಉಕ್ರೇನ್ ಮಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಉಕ್ರೇನ್ ರಷ್ಯಾ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದ ಅಮೆರಿಕ
💥SUNK: Ukrainian Recon Ship WIPED OUT By 🇷🇺 Unmanned Boats At The Mouth Of The Danube
The drone-like boats had been used during July Storm exercises. Ukrainian Armed Forces have acknowledged the loss of the Simferopol vessel.
📹: 🇷🇺 MoD pic.twitter.com/ZKdL2PCdLC
— RT_India (@RT_India_news) August 28, 2025
ಸಿಮ್ಫೆರೊಪೋಲ್ ಅನ್ನು 2019 ರಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಎರಡು ವರ್ಷಗಳ ನಂತರ ಉಕ್ರೇನಿಯನ್ ನೌಕಾಪಡೆಗೆ ಸೇರ್ಪಡೆಯಾಗಿತ್ತು. 2014 ರ ಬಳಿಕ ಉಕ್ರೇನ್ ತಯಾರಿಸಿದ ದೊಡ್ಡ ಹಡಗು ಇದಾಗಿದೆ.
ಕೆಲ ತಿಂಗಳಿನಿಂದ ರಷ್ಯಾ ಡ್ರೋನ್ ಉತ್ಪಾದನೆಗೆ ಹೆಚ್ಚಿಸುತ್ತಿದೆ. ಕಳೆದ ರಾತ್ರಿ ಕ್ಷಿಪಣಿ ದಾಳಿ ನಡೆಸಿ ಉಕ್ರೇನ್‌ನಲ್ಲಿದ್ದ ಡ್ರೋನ್ ಸೌಲಭ್ಯ ಘಟಕವನ್ನು ರಷ್ಯಾ ನಾಶ ಮಾಡಿದೆ.