ಪುಟಿನ್‌ ತಪ್ಪು ಹೆಜ್ಜೆಗಳು – ರಷ್ಯಾ ಹಿನ್ನಡೆಗೆ ಕಾರಣ ಏನು?

Public TV
3 Min Read

ಕೀವ್‌: ಉಕ್ರೇನ್-ರಷ್ಯಾ ಯುದ್ಧ 8ನೇ ದಿನ ಪೂರೈಸಿದೆ. ಆದರೆ ಈವರೆಗೂ ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದಲ್ಲಿ ಅಧಿಪತ್ಯ ಸ್ಥಾಪಿಸಿಲ್ಲ. ರಷ್ಯಾ ತನ್ನ ಆಧುನಿಕ ಯುದ್ಧ ವಿಮಾನಗಳನ್ನು ಸಂಪೂರ್ಣವಾಗಿ ಯುದ್ಧರಂಗಕ್ಕೆ ಇಳಿಸಿಲ್ಲ. ಇದರ ಬದಲಿಗೆ ಸೈಬಿರಿಯಾದಲ್ಲಿ ಸೈನಿಕ ಡ್ರಿಲ್ಸ್‌ಗೆ ಪುಟಿನ್ ಆದೇಶ ನೀಡಿದ್ದಾರೆ.

ಬಾರೆಂಟ್ಸ್ ಸಮುದ್ರದಲ್ಲಿ ಅಣು ಸಬ್ ಮೆರಿನ್ ಕ್ಷಿಪಣಿ ಲಾಂಚರ್‌ಗಳು ಕಾಣಿಸಿಕೊಂಡಿವೆ. ಈ ಮಧ್ಯೆ ರಷ್ಯಾ ಅಂದ್ರೆ ಪುಟಿನ್ ಮಾತ್ರವಲ್ಲ ಎಂದು ಜೈಲಿನಿಂದಲೇ ವಿಪಕ್ಷ ನಾಯಕ ಅಲೆಕ್ಸಿ ನಾವೆಲ್ನಿ ಗುಡುಗಿದ್ದಾರೆ. ರಷ್ಯಾದ ಹೊರಗೆ, ಒಳಗೆ ಪ್ರತಿಘಟನೆ ನಡೆಸಲು ಕರೆ ನೀಡಿದ್ದಾರೆ. ರಷ್ಯಾ ವಿಜ್ಞಾನಿಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿವೆ.

ಹಿನ್ನಡೆಗೆ ಕಾರಣ ಏನು?
ಒಂದು ದೇಶದ ಮೇಲೆ ದಂಡೆತ್ತಿ ಹೋಗುವ ಸೈನ್ಯ ಮೊದಲು ಅಲ್ಲಿನ ವೈಮಾನಿಕ, ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಗಮನದಲ್ಲಿ ಇರಿಸಿಕೊಂಡು ದಾಳಿ ನಡೆಸುತ್ತದೆ. ಈ ಮೂಲಕ ಆ ದೇಶದ ವಾಯುಪ್ರದೇಶದ ಮೇಲೆ ಹಿಡಿತ ಸಾಧಿಸುತ್ತದೆ. ಈ ಮೂಲಕ ಭೂಸೇನೆ ಸಮರ್ಥವಾಗಿ ಹೋರಾಟ ಸಾಗಿಸಲು ಅನುಕೂಲ ಕಲ್ಪಿಸುತ್ತದೆ. ಆದರೆ ಇದು ರಷ್ಯಾ ಕಡೆಯಿಂದ ಆಗಿಲ್ಲ. ಪರಿಣಾಮ, ಉಕ್ರೇನ್ ಯುದ್ಧ ವಿಮಾನಗಳು ಆರ್ಭಟಿಸುತ್ತಿವೆ. ಕಡಿಮೆ ಎತ್ತರದಲ್ಲಿ ಹಾರುತ್ತಾ ರಷ್ಯಾದ ಹೆಲಿಕಾಪ್ಟರ್‌ಗಳನ್ನು ಟಾರ್ಗೆಟ್ ಮಾಡುತ್ತಿವೆ. ಸ್ಟಿಂಗರ್ ಕ್ಷಿಪಣಿ ಮೂಲಕವೂ ರಷ್ಯಾದ ಹೆಲಿಕಾಪ್ಟರ್ ನಾಶ ಮಾಡಲಾಗುತ್ತಿದೆ.  ಇದನ್ನೂ ಓದಿ: ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

ಯುದ್ಧಕ್ಕೆ ರಷ್ಯಾ ಸೈನಿಕರ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ರಷ್ಯಾದ ಯುವ ಸೈನಿಕರಿಗೆ ಸರಿಯಾದ ಶಿಕ್ಷಣ ಸಿಕ್ಕಿಲ್ಲ. ಆತ್ಮಸ್ಥೈರ್ಯ ಕಡಿಮೆ. ಆಹಾರ, ಇಂಧನ ಕೊರತೆ ಕಾಡುತ್ತಿದೆ. ತಮ್ಮ ವಾಹನಗಳನ್ನು ತಾವೇ ಉದ್ದೇಶಪೂರ್ವಕವಾಗಿ ಪಂಕ್ಚರ್ ಮಾಡುತ್ತಿದ್ದಾರೆ. ಉಕ್ರೇನ್ ನಗರಗಳ ಮೇಲೆ ದಾಳಿಗೆ ರಷ್ಯನ್ ಸೈನಿಕರು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ ಎಂದು ಅಮೆರಿಕದ ಪೆಂಟಗಾನ್ ವರದಿ ಮಾಡಿದೆ.

ಉಕ್ರೇನ್ ಸೇನೆ ಬೇಗ ಶರಣಾಗಿ ಕೀವ್ ತಮ್ಮ ವಶವಾಗುತ್ತದೆ. ಅದೇ ಉತ್ಸಾಹದಲ್ಲಿ ದಕ್ಷಿಣ ಪ್ರಾಂತ್ಯ ವಶಕ್ಕೆ ತೆಗೆದುಕೊಳ್ಳಬಹುದು. ಇದಕ್ಕೆ ಉಕ್ರೇನ್‍ನ ವಾಯು ಪ್ರದೇಶದ ಮೇಲೆ ಅಧಿಪತ್ಯ ಸಾಧಿಸುವ ಅಗತ್ಯವಿಲ್ಲ ಎಂದು ಪುಟಿನ್ ಅಂದಾಜಿಸಿದ್ದರು. ಇದೇ ಲೆಕ್ಕದಲ್ಲಿ ರಷ್ಯಾ ಸೈನಿಕ ಕಾರ್ಯಾಚರರಣೆ ಕೈಗೊಂಡಿರಬಹುದು. ಆದ್ರೇ ಈವರೆಗೂ ರಷ್ಯಾದ ಈ ಯುದ್ಧ ತಂತ್ರ ಫಲ ಕೊಟ್ಟಿಲ್ಲ. ಇದನ್ನೂ ಓದಿ: 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ

ವಾಯುಪ್ರದೇಶದ ರಕ್ಷಣೆ ನೀಡದೇ ರಷ್ಯಾ ಯುದ್ಧ ಟ್ಯಾಂಕ್ ಕಣಕ್ಕಿಳಿಸಿದೆ. ಉಕ್ರೇನ್‍ಗೆ ಸೇರಿದ ಬೆರಕ್ತಿಯಾರ್ ಟಿಬಿ-62ಯಂತಂಹ ಶಸ್ತ್ರಾಸ್ತ್ರ ಡ್ರೋನ್‍ಗಳು ರಷ್ಯಾದ ಯುದ್ಧ ಟ್ಯಾಂಕ್‍ಗಳಿಗೆ ಅಪಾರ ಹಾನಿ ಉಂಟು ಮಾಡುತ್ತಿವೆ.

ಶಸ್ತ್ರಾಸ್ತ್ರ ಕಾಪಾಡಿಕೊಳ್ಳುವಲ್ಲಿ ಉಕ್ರೇನ್ ಜಾಣ ನಡೆ ಅನುಸರಿಸುತ್ತಿದೆ. ರಷ್ಯಾ ಎಷ್ಟೇ ದಾಳಿ ಮಾಡಿದರೂ ತಮ್ಮ ಯುದ್ಧ ವಿಮಾನ, ಹೆಲಿಕಾಪ್ಟರ್ ಸೇರಿ ಹಲವು ಈಗಲೂ ವಿನಿಯೋಗಿಸುವ ಸ್ಥಿತಿಯಲ್ಲೇ ಇವೆ.

ರಷ್ಯಾದ 300 ಅತ್ಯಾಧುನಿಕ ಯುದ್ಧ ವಿಮಾನ ಇನ್ನೂ ಗಡಿಯಲ್ಲೇ ನಿಂತಿದೆ. ಯುದ್ಧ ವಿಮಾನಗಳಿಂದ ಕೆಳಗೆ ಹಾಕುವ ಪಿಜಿಎಂ ಬಾಂಬ್‍ಗಳ ಕೊರತೆ ಎದುರಿಸುತ್ತಿದೆ. ವಿಮಾನ ವಿಧ್ವಂಸದ ಕ್ಷಿಪಣಿ ದಾಳಿಗೆ ರಷ್ಯಾ ಹಿಂದೇಟು ಹಾಕುತ್ತಿದೆ. ಒಂದು ವೇಳೆ ಈ ರೀತಿಯ ದಾಳಿ ನಡೆಸಿದರೆ ನಮ್ಮ ವಿಮಾನಗಳಿಗೆ ಕಂಟಕವಾಗುವ ಭೀತಿ ಎದುರಿಸುತ್ತಿದೆ. ಎರಡು ವಿಭಾಗಗಳಲ್ಲಿ ಗರಿಷ್ಠ ಸಮನ್ವಯ ಅಗತ್ಯ. ಆದರೆ ಇದು ರಷ್ಯಾ ಬಳಿ ಇರುವುದು ಅಷ್ಟಕ್ಕಷ್ಟೇ.

ಪಶ್ಚಿಮ ದೇಶಗಳಿಗೆ ಹೋಲಿಸಿದರೆ ರಷ್ಯಾ ಪೈಲಟ್‍ಗಳ ಶಿಕ್ಷಣ ಗುಣಮಟ್ಟ ಕಡಿಮೆ. ವಾರ್ಷಿಕ ಸರಾಸರಿ 100 ಗಂಟೆ ಹಾರಾಟದ ಅನುಭವ ಇದ್ದರೆ ಅಮೆರಿಕದಲ್ಲಿ 180 ಗಂಟೆ ಹಾರಾಟದ ಅನುಭವ ಹೊಂದಿದ್ದರು. ಯುದ್ಧ ವಿಮಾನದಲ್ಲಿನ ತಂತ್ರಜ್ಞಾನ, ಏವಿಯಾನಿಕ್ಸ್‌ ಎಷ್ಟು ಮುಖ್ಯವೋ ಅಷ್ಟೇ ಪೈಲಟ್‌ನ ಸಾಮರ್ಥ್ಯ ಮುಖ್ಯವಾಗುತ್ತದೆ. ಉದಾಹರಣೆ ವಿಂಗ್‌ ಕಮಾಂಡರ್‌ ಅಭಿನಂದವ್‌ ವರ್ಧಮಾನ್‌ ಮಿಗ್‌ 21 ಬೈಸನ್‌ ವಿಮಾನದ ಮೂಲಕ ಡಾಗ್‌ ಫೈಟ್‌( ಶತ್ರು ರಾಷ್ಟ್ರಗಳ ಯುದ್ಧ ವಿಮಾನಗಳ ಕಾದಾಟ) ನಡೆಸಿ ತನ್ನ ಕ್ಷಿಪಣಿ ಮೂಲಕ ಪಾಕಿಸ್ತಾನದ ಎಫ್‌ 16 ವಿಮಾನವನ್ನು ಬೀಳಿಸಿದ್ದರು. ಎಫ್‌ 16 ವಿಮಾನದ ಸಾಮರ್ಥ್ಯದ ಮುಂದೆ ಮಿಗ್‌ ವಿಮಾನ ಸಾಮರ್ಥ್ಯ ಏನೂ ಇಲ್ಲ. ಹೀಗಿದ್ದರೂ ಅಭಿನಂದನ್‌ ತನ್ನ ಕೌಶಲದಿಂದ ಎಫ್‌ 16 ವಿಮಾನವನ್ನು ಬೀಳಿಸಿದ್ದ ವಿಚಾರ ಕೇಳಿ ಇಡೀ ವಿಶ್ವವೇ ಬೆರಗಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *