ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ ಮೇಯರ್ ಬಿಡುಗಡೆ

By
1 Min Read

ಕೀವ್: ಕಳೆದ ವಾರ ರಷ್ಯಾ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ನ ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರು ಬಿಡುಗಡೆಗೊಂಡಿದ್ದಾರೆ.

ಈ ಬಗ್ಗೆ ಉಕ್ರೇನ್‍ನ ರಕ್ಷಣಾ ಸಚಿವಾಲಯ ಅಧಿಕೃತವಾದ ಮಾಹಿತಿ ಹಂಚಿಕೊಂಡಿದ್ದು, ಅಧ್ಯಕ್ಷ ವೊಲೊಡಿಮಿರ್ ಝೆಲೇನ್ಸ್ಕಿ ಅವರು ಮೆಲಿಟೊಪೋಲ್‍ನ ಮೇಯರ್‍ನೊಂದಿಗೆ ಮಾತನಾಡುತ್ತಿರುವ ತುಣುಕನ್ನು ಬಿಡುಗಡೆ ಮಾಡಿದೆ.

ಈ ವೀಡಿಯೋದಲ್ಲಿ ಮೇಯರ್ ಅವರು ಝೆಲೆನ್ಸ್ಕಿಗೆ ಧನ್ಯವಾದ ತಿಳಿಸುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಝೆಲೆನ್ಸ್ಕಿ ನಾವು ನಮ್ಮವರನ್ನು ಬಿಟ್ಟುಕೊಡುವುದಿಲ್ಲ ಎಂದು ಉತ್ತರಿಸಿದ್ದಾರೆ. ಮೇಯರ್‌ನ್ನು ಬಿಡುಗಡೆಗೊಳಿಸಲು ಉಕ್ರೇನ್ ರಷ್ಯಾದ 9 ಸೈನಿಕರನ್ನು ಹಸ್ತಾಂತರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

ಫೆಡೋರೊವ್‍ನ್ನು ಕಳೆದ ವಾರ ರಷ್ಯಾ ಪಡೆಗಳು ಕಿಡ್ನಾಪ್ ಮಾಡಿದ್ದರು. ಫೆಡೋರೊವ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಝೆಲೆನ್ಸ್ಕಿಯ ಕಚೇರಿ ಈ ಹಿಂದೆ ಹೇಳಿತ್ತು ಆದರೆ ಯಾವುದೇ ವಿವರಗಳನ್ನು ನೀಡಿಲ್ಲ. ಫೆಡೋರೊವ್ ಅವರನ್ನು ಮಾರ್ಚ್ 11 ರಂದು ರಷ್ಯಾದ ಪಡೆಗಳು ಅಪಹರಿಸಿದ್ದವು. 10 ಆಕ್ರಮಿತರ ಗುಂಪು ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರನ್ನು ಅಪಹರಿಸಿದೆ ಎಂದು ಉಕ್ರೇನ್ ಸಂಸತ್ ಟ್ವಿಟ್ಟರ್‌ನಲ್ಲಿ ತಿಳಿಸಿತ್ತು. ಇದನ್ನೂ ಓದಿ: ಸದಾ ಹೃದಯಲ್ಲಿ ಪುನೀತ್ ಸವಿ ನೆನಪುಗಳನ್ನು ನೆನೆಯೋಣ: ಸುಮಲತಾ

ಮೇಯರ್ ಅವರು ನಗರದ ಬಿಕ್ಕಟ್ಟಿನ ಕೇಂದ್ರದಲ್ಲಿ ಮೂಲಸೌಕರ್ಯ ಪೂರೈಕೆಯಲ್ಲಿನ ಸಮಸ್ಯೆಗಳ ಬಗ್ಗೆ ವ್ಯವಹರಿಸುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ. ಶುಕ್ರವಾರ ತಡರಾತ್ರಿ ವೀಡಿಯೋ ಸಂದೇಶವೊಂದರಲ್ಲಿ ಝೆಲೆನ್‍ಸ್ಕಿ ಅಪಹರಣವನ್ನು ದೃಢಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *