ತಕ್ಷಣವೇ ಕದನ ವಿರಾಮ ಘೋಷಿಸಿ: ರಷ್ಯಾಗೆ ಉಕ್ರೇನ್‌ ಮನವಿ

Public TV
1 Min Read

ಕೀವ್‌: ಸೋಮವಾರ ನಡೆದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಉಕ್ರೇನ್‌ ತಕ್ಷಣದ ಕದನ ವಿರಾಮ ಘೋಷಿಸುವಂತೆ ರಷ್ಯಾವನ್ನು ಒತ್ತಾಯಿಸಿತು.

ಕೀವ್‌ನ ಸಮಾಲೋಚಕರು ಪುಟಿನ್‌ ಅವರೊಂದಿಗೆ ನೇರ ಮಾತುಕತೆಗೆ ಒತ್ತಾಯಿಸುತ್ತಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಲಿನ ಯುದ್ಧ ಅಕ್ಷಮ್ಯ ಅಪರಾಧ: ರಷ್ಯಾ ಪೈಲಟ್‌ ಸಂದೇಶದ ವೀಡಿಯೋ ವೈರಲ್‌

ಎರಡೂ ದೇಶಗಳು ಮಾತುಕತೆಗಳನ್ನು ಸೋಮವಾರ ವಿರಾಮಗೊಳಿಸಿವೆ. ಮಂಗಳವಾರ ಮಾತುಕತೆ ಮುಂದುವರಿಯಲಿದೆ ಎಂದು ಉಕ್ರೇನ್‌ ಸಮಾಲೋಚಕರೊಬ್ಬರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಈ ನಡುವೆ, ಉಕ್ರೇನ್‌ ವಿರುದ್ಧದ ಹೋರಾಟಕ್ಕೆ ಮಿಲಿಟರಿ ನೆರವು ನೀಡುವಂತೆ ಚೀನಾಗೆ ರಷ್ಯಾ ಕೇಳಿದೆ ಎಂಬ ಯುಎಸ್‌ ಸುದ್ದಿ ಸಂಸ್ಥೆಗಳ ವರದಿ ಸುಳ್ಳು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ರಷ್ಯಾದಿಂದ ಯಾವುದೇ ಕೋರಿಕೆ ಬಂದಿಲ್ಲ. ಈ ವಿಚಾರವಾಗಿ ಹರಿದಾಡುತ್ತಿರುವುದು ತಪ್ಪು ಮಾಹಿತಿ ಎಂದು ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್ ಮೆದುಳಿನ ಗಂಭೀರ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ: ಗುಪ್ತಚರ ವರದಿ

ಯುದ್ಧ ಹೀಗೆ ಮುಂದುವರಿದರೆ ಉಕ್ರೇನ್‌ನ ಆರ್ಥಿಕತೆಯಲ್ಲಿ ಶೇ. 35 ರಷ್ಟು ಕುಸಿತ ಉಂಟಾಗಲಿದೆ. ಆಹಾರ ಭದ್ರತೆಗೂ ಹೊಡೆತ ಬೀಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *