ಅಪ್ಪ-ಅಮ್ಮ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಿ, ನನ್ನ ಬಗ್ಗೆ ಯೋಚಿಸ್ಬೇಡಿ- ಯೋಧನ ಭಾವುಕ ವೀಡಿಯೋ ವೈರಲ್

Public TV
1 Min Read

ಕೀವ್: ರಷ್ಯಾ ರಣೋತ್ಸಾಹ 4ನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ದಾಳಿಗೆ ಪುಟ್ಟ ದೇಶವಾಗಿರುವ ಉಕ್ರೇನ್ ಪತರಗುಟ್ಟಿದೆ. ಇದರ ಮಧ್ಯೆ ಉಕ್ರೇನ್ ಸೈನಿಕರೊಬ್ಬರು ತಮ್ಮ ಪೋಷಕರನ್ನು ನೆನಪು ಮಾಡಿಕೊಂಡು ಭಾವುಕರಾದ ವೀಡಿಯೋ ಇದೀಗ ವೈರಲ್ ಆಗುತ್ತಿದೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ಈಗಾಗಲೇ ಉಭಯ ದೇಶಗಳ ಹಲವಾರು ಸೈನಿಕರು ಹತರಾಗಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‍ನ ಫೋಟೋಬ್ರಿಡ್ಜ್ ನಲ್ಲಿ ಏಕಾಂಗಿಯಾಗಿ ಗಡಿ ರಕ್ಷಣೆ ಮಾಡುತ್ತಿರುವ 21 ವರ್ಷದ ಸೆರ್ಗಿ ಪೆಟ್ರೋಶೆಂಕೊ ಯೋಧ ಇದೀಗ ತನ್ನ ಪೋಷಕರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ:‌ ಪ್ರಧಾನಿಗೆ ಕರೆ ಮಾಡಿ ರಾಜಕೀಯ ಬೆಂಬಲ ಕೋರಿದ ಉಕ್ರೇನ್ ಅಧ್ಯಕ್ಷ

ಯೋಧನ ಪೋಷಕರು ವಾಸವಾಗಿರುವ ಸ್ಥಳದಲ್ಲಿ ರಷ್ಯಾ ಯೋಧರು ದಾಳಿ ನಡೆಸಿದ್ದಾರೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಯೋಧ ತಮ್ಮ ಹೆತ್ತವರನ್ನು ನೆನೆದು ಗದ್ಗದಿತರಾಗಿದ್ದಾರೆ. ನಾನು ಜೀವಂತವಾಗಿ ಉಳಿಯುತ್ತೇನೋ ಇಲ್ಲವೋ ಗೋತ್ತಿಲ್ಲ. ಆದರೆ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ, ನನ್ನ ಬಗ್ಗೆ ಯಾವುದೇ ಕಾರಣಕ್ಕೂ ಯೋಚನೆ ಮಾಡಬೇಡಿ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:‌ ಶೀಘ್ರವೇ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿರುವ ಜರ್ಮನಿ

https://twitter.com/Yashika1Keswani/status/1497555000314445828

ಇತ್ತ ಉಕ್ರೇನ್‍ನ ರಸ್ತೆಗಳಲ್ಲಿ ಬಾಂಬ್ ದಾಳಿ, ಅಪಾರ್ಟ್‍ಮೆಂಟ್‍ಗಳ ಮೇಲೆ ರಷ್ಯಾ ಸೈನಿಕರು ಮಿಸೈಲ್ ದಾಳಿ ಮಾಡುತ್ತಿದ್ದಾರೆ. ಬಂಕರ್‍ಗಳ ಹೊರಗೆ ಬಾಂಬ್ ಸದ್ದು ಕೇಳಿಸುತ್ತಿದ್ದು, ಜನ ಜೀವ ಭಯದಲ್ಲಿದ್ದಾರೆ. ಉಕ್ರೇನ್‍ನ ಕಾರ್ಕೀವ್ ಹಾಗೂ ಕೀವ್‍ನಲ್ಲಿ ರಾತ್ರಿಯೂ ಗುಂಡಿನ ಮೊರೆತ ಕೇಳಿಸಿತ್ತು. ಕಗ್ಗತ್ತಲ ರಾತ್ರಿಯಲ್ಲಿ ಆಗಸದಲ್ಲಿ ಬಾಂಬ್, ಮಿಸೈಲ್‍ಗಳ ಆರ್ಭಟ ಇತ್ತು. ಉಕ್ರೇನ್ ರಕ್ಷಣೆ ಮಾಡಲು ಸಾವಿರಾರು ಯೋಧರು ರಷ್ಯಾ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಇದನ್ನೂ ಓದಿ:‌ ಅಪ್ಪ-ಅಮ್ಮ ಬಳಿ ಸುಳ್ಳು ಹೇಳಿದ್ದೆವು- ಉಕ್ರೇನ್ ಅನುಭವ ಹಂಚಿಕೊಂಡ ವಿದ್ಯಾರ್ಥಿನಿ

Share This Article
Leave a Comment

Leave a Reply

Your email address will not be published. Required fields are marked *