ಹೆಂಡ್ತಿಯನ್ನ ಕ್ರೂರವಾಗಿ ಕೊಂದು, 200 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದ ಹಂತಕ!

Public TV
2 Min Read

– ಮೃತದೇಹ ವಿಲೇವಾರಿಗೆ 50 ಡಾಲರ್‌ ಕೊಟ್ಟಿದ್ದ – ಪಾಪಿ ಪತಿ ಸಿಕ್ಕಿಬಿದ್ದದ್ದು ಹೇಗೆ?

ಲಂಡನ್‌: ಯುಕೆನಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು (UK Murder Case) ಬೆಳಕಿಗೆ ಬಂದಿದೆ. 28 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನ ಚಾಕುವಿನಿಂದ ಹಿರಿದು ಕೊಂದಿರುವ ಘಟನೆ ನಡೆದಿದೆ. ಹತ್ಯೆಗೈದ ಬಳಿಕ ಆಕೆಯ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ, ಒಂದು ವಾರ ಅಡುಗೆಮನೆಯಲ್ಲಿಟ್ಟು, ಬಳಿಕ ತನ್ನ ಸ್ನೇಹಿತನ ಸಹಾಯದಿಂದ ನದಿಗೆ ಎಸೆದಿದ್ದಾನೆ.

ಆರೋಪಿ (Accused) ನಿಕೋಲಸ್‌ ಮೆಟ್ಸನ್‌ (28), ತನ್ನ ಪತ್ನಿ ಹಾಲಿ ಬ್ರಾಮ್ಲಿ (26)ಯನ್ನ ಕಳೆದ ಮಾರ್ಚ್‌ 26 ರಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ವಯನಾಡ್ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ ಪ್ರಕರಣ – 29 ಗಂಟೆಗಳ ಕಾಲ ನಿರಂತರ ಹಲ್ಲೆ

ತುಂಡು ದೇಹ ವಿಲೇವಾರಿಗೆ 50 ಡಾಲರ್‌ ಕೊಟ್ಟಿದ್ದ:
ತನ್ನ ಹೆಂಡತಿಯನ್ನ ಕ್ರೂರವಾಗಿ ಹತ್ಯೆಗೈದಿದ್ದ ಮೆಟ್ಸನ್‌, ಬಳಿಕ ಸ್ನಾನದ ಕೋಣೆಯಲ್ಲಿ ಆಕೆಯ ಮೃತದೇಹವನ್ನ 200 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಟ್ಟಿದ್ದ. ದೇಹ ದುರ್ವಾಸನೆ ಬೀರದಂತೆ ನೋಡಿಕೊಳ್ಳಲು ತಂಪಾದ ಪ್ರದೇಶದಲ್ಲಿ ಇಟ್ಟಿದ್ದ, ಜೊತೆಗೆ ರೂಮ್‌ ಸ್ಪ್ರೇ ಸಿಂಪಡಣೆ ಮಾಡುತ್ತಿದ್ದ. ಮೃತ ಮಹಿಳೆಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಒಂದು ವಾರದ ಬಳಿಕ ವಿಚಾರಣೆಗಾಗಿ ಹಂತಕನ ಮನೆಗೆ ಬಂದಿದ್ದರು. ಆದ್ರೆ ಭೂಪ ಮೆಟ್ಸನ್‌ ಅದಕ್ಕೂ ಮುನ್ನವೇ ತನ್ನ ಸ್ನೇಹಿತನಿಗೆ 50 ಡಾಲರ್‌ ಕೊಟ್ಟು ತುಂಡು ದೇಹವನ್ನ ವಿಲೇವಾರಿ ಮಾಡಿಸಿದ್ದ. ತಾನು ಪ್ರಕರಣದಲ್ಲಿ ಸಿಕ್ಕ ಬಳಿಕವೇ ಈ ಸತ್ಯವನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು (UK Police) ತಿಳಿಸಿದ್ದಾರೆ. ಇದನ್ನೂ ಓದಿ: ಹದಿಹರೆಯದ ಹುಡುಗರೇ ಇವಳ ಟಾರ್ಗೆಟ್‌ – ಸೆಕ್ಸ್‌ಗಾಗಿ 14 ವರ್ಷದ ಹುಡುಗಿಯಂತೆ ನಟಿಸಿದ್ದ ಮಾಯಗಾತಿ ಅರೆಸ್ಟ್‌!

ನದಿಯಲ್ಲಿ ತುಂಡು ದೇಹ ಸಿಕ್ಕಿದ್ದು ಹೇಗೆ?
ತನ್ನ ಸ್ನೇಹಿತ ಸಹಾಯದಿಂದ ಮೆಟ್ಸನ್‌ ಮೃತ ಹೆಂಡತಿಯ ತುಂಡು ದೇಹವನ್ನು ನದಿಯಲ್ಲಿ ಬಿಸಾಡಿದ ಮರುದಿನ ಬೆಳಗ್ಗೆ ಅಲ್ಲೇ ವಾಕಿಂಗ್‌ ಮಾಡುತ್ತಿದ್ದ ಸ್ಥಳೀಯರು ತೇಲುತ್ತಿದ್ದ ಪ್ಲಾಸ್ಟಿಕ್‌ ಚೀಲವೊಂದನ್ನು ಗಮನಿಸಿದರು. ಅನುಮಾನಗೊಂಡು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಬಳಿಕ ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ ಮಹಿಳೆಯ ಕೈ-ಕಾಲುಗಳು, ತಲೆ, ದೇಹದ ಇತರ ತುಂಡಾಗಿರುವ 200ಕ್ಕೂ ಹೆಚ್ಚು ಬಿಡಿ ಭಾಗಗಳು ಕಂಡುಬಂದಿತು. ಪೊಲೀಸರಿಗೆ ಮೃಹ ದೇಹ ಯಾರದ್ದು ಅಂತಾ ಗುರುತಿಸೋದಕ್ಕೆ ಕೆಲ ದಿನಗಳು ಬೇಕಾಯಿತು. ಕಳೆದ ಮಾರ್ಚ್‌ 24 ರಂದು ಲಿಂಕನ್‌ಶೈರ್ ಪೊಲೀಸರು ಬ್ರಾಮ್ಲಿ ಅವರ ನಿವಾಸಕ್ಕೆ ವಿಚಾರಣೆಗೆ ತೆರಳಿದ್ದರು. ಈ ವೇಳೆ ಮೆಟ್ಸನ್‌ ಮಾತುಗಳಿಂದ ಅನುಮಾನಗೊಂಡ ಪೊಲೀಸರು ಆತನನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಾನೇ ಕೊಂದಿರುವುದಾಗಿ ಸತ್ಯ ಒಪ್ಪಿಕೊಂಡನು. ಬಳಿಕ ಆತನನ್ನ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಗಂಡ-ಹೆಂಡತಿ ನಡುವೆ ಕೌಟುಂಬಿಕ ಕಲಹ ನಡೆದಿತ್ತು ಎಂಬ ವಿಚಾರವನ್ನು ಮೆಟ್ಸನ್‌ ನ್ಯಾಯಾಲಯಕ್ಕೆ ತಿಳಿಸಿದ್ದನು.

ಹಂತಕನಿಗೆ ಮಾನಸಿಕ ಕಾಯಿಲೆ ಇರೋದು ನಿಜವೇ?
ಸದ್ಯ ಆರೋಪಿ ಮತ್ತು ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್‌ ಮೆಟ್ಸನ್‌ನನ್ನ ಅಪರಾಧಿ ಎಂದು ಪರಿಗಣಿಸಿದೆ. ಈ ನಡುವೆ ಹಂತಕನ ಪರ ವಕೀಲರು ಮೆಟ್ಸನ್‌ ಆಟಿಸಂ ಸ್ಪೆಕ್ಟ್ರಮ್ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಮಾನಸಿಕವಾಗಿ ಒತ್ತಡ ಉಂಟಾಗಿದ್ದರಿಂದ ಅವನು ಹಾಗೆ ಮಾಡಿರಬಹುದು ಎಂದು ವಾದಿಸಿದ್ದಾರೆ.‌ ಈ ಹಿನ್ನೆಲೆಯಲ್ಲಿ ಕೋರ್ಟ್‌ ಮೆಟ್ಸನ್‌ಗೆ ಶಿಕ್ಷೆಯನ್ನು ಕಾಯ್ದಿರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜನರ ಸಮಸ್ಯೆ ಏನೇ ಇದ್ರೂ ಸಹಾಯಕ್ಕೆ ಬರೋದು ನಾವೇ, ದೆಹಲಿಯಿಂದ ಯಾರೂ ಬರಲ್ಲ: ಡಿಕೆಶಿ

Share This Article