ಬ್ರಿಟನ್‌ನಲ್ಲಿ ಸ್ಥಳೀಯರು Vs ವಲಸಿಗ ಮುಸ್ಲಿಮರ ಮಧ್ಯೆ ಸಂಘರ್ಷ – 148 ಮಂದಿ ಬಂಧನ

Public TV
2 Min Read

ಲಂಡನ್‌: ಬ್ರಿಟನ್‌ನಲ್ಲಿ (Great Britain) ಸ್ಥಳೀಯರು, ಬಲಪಂಥೀಯರು ಮತ್ತು ವಲಸಿಗ ಮುಸ್ಲಿಮರ (Migrant Muslims) ನಡುವೆ ನಡೆಯುತ್ತಿರುವ ಸಂಘರ್ಷ ಮತ್ತು ಹಿಂಸಾಚಾರಕ್ಕೆ ತಾರಕಕ್ಕೆ ಏರಿದ್ದು ಇಲ್ಲಿಯವರೆಗೆ ಯುಕೆ ಪೊಲೀಸರು (UK Police) ಸುಮಾರು 148 ಮಂದಿಯನ್ನು ಬಂಧಿಸಿದ್ದಾರೆ.

4 ದಿನಗಳ ಹಿಂದೆ ಸಣ್ಣದಾಗಿ ಆರಂಭವಾಗಿದ್ದ ಪ್ರತಿಭಟನೆ, ಹಿಂಸಾಚಾರ ಇದೀಗ ದೇಶದ ಹಲವು ನಗರಗಳಿಗೆ ಹರಡಿದ್ದು ಹೋಟೆಲ್‌, ಅಂಗಡಿಗಳ ಮೇಲೆ ದಾಳಿಯಾಗುತ್ತಿದೆ.

 

ಪ್ರತಿಭಟನೆ ಯಾಕೆ?
ನೃತ್ಯ ತರಗತಿ ವೇಳೆ ಮೂವರು ಬ್ರಿಟಿಷ್‌ ಬಾಲಕಿಯರನ್ನು ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ಬಳಿಕ ಕೃತ್ಯ ಎಸಗಿದ ಆಕ್ಸೆಲ್ ರುಡಕುಬಾನಾ 17 ವರ್ಷದ ಯುವಕನನ್ನು ಬಂಧಿಸಲಾಗಿತ್ತು. ಹಂತಕ ಮುಸ್ಲಿಂ ವಲಸಿಗ ಎಂಬ ವದಂತಿ ಹರಡಿದ್ದರಿಂದ ಈಗ ಸ್ಥಳೀಯರು ಮತ್ತು ಬಲಪಂಥೀಯ ಸಂಘಟನೆಗಳು ಪ್ರತಿಭಟನೆಗಳು ಇಳಿದಿವೆ. ಆದರೆ ಹಂತಕ ಕ್ರಿಶ್ಚಿಯನ್‌ ಎಂದು ವರದಿಯಾಗಿದೆ. ಇದನ್ನೂ ಓದಿ: ನಿಗದಿಯಾಗಿದ್ದ ಕೊಪ್ಪಳ, ವಿಜಯನಗರ ಸಿಎಂ ಪ್ರವಾಸ ದಿಢೀರ್‌ ರದ್ದು

ಇತ್ತೀಚಿಗೆ ಮುಕ್ತಾಯಗೊಂಡ ಸಂಸತ್‌ ಚುನಾವಣೆ ವೇಳೆ ಮುಸ್ಲಿಮರಿಗೆ ಹಲವು ಭರವಸೆ ನೀಡಿ ಕೀರ್ ಸ್ಟಾರ್ಮರ್‌ (Keir Starmer) ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಮುಸ್ಲಿಮರಿಗೆ ನೀಡಿದ ಭರವಸೆಗಳಿಗೆ ಸ್ಥಳೀಯರು ಮತ್ತು ಬಲಪಂಥೀಯ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈಗ ಮೂವರು ಬಾಲಕಿಯರ ಮೇಲೆ ಹತ್ಯೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆ ಪ್ರತಿಭಟನೆ ಈಗ ಸಂಘರ್ಷದ ಸ್ವರೂಪ ಪಡೆದುಕೊಂಡಿದೆ. ಪ್ರಧಾನಿ ಕೀರ್ ಸ್ಟಾರ್ಮರ್‌ ಅವರು ಈಗ ಪ್ರತಿಭಟನಾಕರರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

 

 

 

ಲಿವರ್‌ಪೂಲ್, ಹಲ್, ಬ್ರಿಸ್ಟಲ್, ಲೀಡ್ಸ್‌ನಲ್ಲಿ ನಡೆದ ಘರ್ಷಣೆಗಳಲ್ಲಿ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗೆ ನುಗ್ಗಿ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿವೆ. ಇದನ್ನೂ ಓದಿ: ಬಿಹಾರದಲ್ಲಿ ಕನ್ವರ್ ಯಾತ್ರೆ ವೇಳೆ ಡಿಜೆ ವಾಹನಕ್ಕೆ ವಿದ್ಯುತ್ ಸ್ಪರ್ಶ – 9 ಮಂದಿ ದುರ್ಮರಣ

ಲೀಡ್ಸ್‌ನಲ್ಲಿ ಸರಿಸುಮಾರು 150 ಜನರು ಇಂಗ್ಲಿಷ್ ಧ್ವಜಗಳನ್ನು ಹಿಡಿದುಕೊಂಡು, ನೀವು ಇನ್ನು ಮುಂದೆ ಇಂಗ್ಲಿಷ್ ಪ್ರಜೆಗಳಲ್ಲ ಎಂದು ಎಂದು ವಲಸಿಗರ ವಿರುದ್ಧ ಘೋಷಣೆ ಕೂಗಿದ್ದಾರೆ. ಮುಸ್ಲಿಮರು ಅಲ್ಲಾ ಹು ಅಕ್ಬರ್‌ ಕೂಗುತ್ತಾ ಮಾರಕಾಸ್ತ್ರ ಹಿಡಿದು ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದ್ದರಿಂದ ಹೋಟೆಲ್‌, ಮಾಲ್‌ಗಳ ಮೇಲೂ ದಾಳಿ ನಡೆಯುತ್ತಿದೆ.

 

Share This Article