856 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಉಜ್ಜಯಿನಿ ದೇಗುಲ ಇಂದು ಲೋಕಾರ್ಪಣೆ

Public TV
2 Min Read

ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) 856 ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡಿರುವ ಉಜ್ಜಯಿನಿಯ `ಮಹಾಕಾಲೇಶ್ವರ ದೇವಾಲಯ’ (Mahakaleshwar Temple) ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಲೋಕಾರ್ಪಣೆಗೊಳಿಸಲಿದ್ದಾರೆ.

ಕಾರಿಡಾರ್‌ಗೆ `ಮಹಾಕಾಲ ಲೋಕ’ (MahakalLok) ಎಂದು ಹೆಸರಿಡಲಾಗಿದೆ. ಇದು ದ್ವಾದಶ, ಜೋತಿರ್ಲಿಂಗಳಲ್ಲಿ ಒಂದಾದ ಉಜ್ಜಯಿನಿಯ (Ujjaini) ಮಹಾಕಾಲೇಶ್ವರ ದೇಗುಲ ನವೀಕೃತ ರೂಪದಲ್ಲಿ ಕಂಗೊಳಿಸಲಿದೆ. ಹಾಗಾಗಿ ಪ್ರವಾಸೋದ್ಯಮ ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ ಮೇಲೆ ಚಲಾಯಿಸಿದ ಚಾಲಕ – ಅಪಘಾತಕ್ಕೆ ನಿವೃತ್ತ ಯೋಧ ಬಲಿ

ಇದಕ್ಕೂ ಮುನ್ನ ದೇಗುಲದ ಸುತ್ತಲಿನ ಜಾಗ ಇಕ್ಕಟ್ಟಾಗಿತ್ತು. ನಂತರ ತೆರವು ಕಾರ್ಯಾಚರಣೆ ನಡೆಸಿ ಕಾಶಿ ಮಾದರಿಯಲ್ಲಿ ವಿಶಾಲ ಕಾರಿಡಾರ್ ನಿರ್ಮಿಸಲಾಗಿದೆ. ಇದರಿಂದ ಕಣ್ಮನ ಸೆಳೆಯುವ ವಾಸ್ತುಶಿಲ್ಪಗಳು ಚಿತ್ತಾಕರ್ಷಕ ನೋಟವನ್ನು ಬೀರುತ್ತವೆ. ಪ್ರಧಾನಿ ಮೋದಿ ಮಂಗಳವಾರ (ಅ.11) ಸಂಜೆ 5:30ಕ್ಕೆ ಉಜ್ಜಯಿನಿಗೆ ಬಂದಿಳಿಯಲಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಕಾರಿಡಾರ್ ಉದ್ಘಾಟನೆ ಬಳಿಕ `ನಂದಿದ್ವಾರದ ಕೆಳಗೆ ಪವಿತ್ರ ಮೋಲಿ (ದಾರ)ಯಿಂದ ಸುತ್ತಿ ಮುಚ್ಚಿಡಲಾದ ಶಿವಲಿಂಗವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದನ್ನೂ ಓದಿ: ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಿ- ಉಕ್ರೇನ್‌ನಲ್ಲಿನ ನಾಗರಿಕರಿಗೆ ಭಾರತ ಸಲಹೆ

ಏನಿದೆ ವಿಶೇಷತೆ?
12 ಜೋತಿರ್ಲಿಂಗ ಕ್ಷೇತ್ರಗಳಲ್ಲಿ ಉಜ್ಜಯಿನಿ ಮಹಾಕಾಲೇಶ್ವರ ದೇಗುಲವೂ ಒಂದು. ಇದನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ 2017ರಲ್ಲಿ ಕಾಮಗಾರಿ ಆರಂಭಿಸಲಾಯಿತು. 856 ಕೋಟಿ ವೆಚ್ಚದ 1ನೇ ಹಂತದ ಕಾಮಗಾರಿ ಇದೀಗ ಪೂರ್ಣಗೊಂಡಿದೆ. ಅಭಿವೃದ್ಧಿ ಯೋಜನೆಯಿಂದಾಗಿ ದೇಗುಲದ ವಿಸ್ತೀರ್ಣ 2.87 ರಿಂದ 47 ಹೆಕ್ಟೆರ್‌ಗೆ ವಿಸ್ತರಣೆಗೊಂಡಿದೆ. ದೇಶದಲ್ಲೇ ಅತಿ ಉದ್ದವಾದ 900 ಮೀಟರ್ ಕಾರಿಡಾರ್ ಇದಾಗಿದೆ.

ಅಂಬುಲೆನ್ಸ್ (Ambulance), ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಶಿವಪುರಾಣ ಆಧರಿಸಿ ಕಾರಿಡಾರ್ ಪ್ರಾರಂಭದಲ್ಲಿ 2 ಬೃಹತ್ ಹೆಬ್ಬಾಗಿಲು ಇದೆ. ರಾಜಸ್ಥಾನ ಮರಳುಗಲ್ಲುಗಳನ್ನು ಬಳಸಿ, 3 ರಾಜ್ಯಗಳ ಕಲಾವಿದರಿಂದ ಕೆತ್ತನೆ ಕೆಲಸ ಮಾಡಿಸಲಾಗಿದೆ. ಪ್ರವಾಸಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *