‘ಯುಐ’ ಚಿತ್ರದ ಭಾಗವಾಗಿರೋದು ನನ್ನ ಅದೃಷ್ಟ: ನಿಧಿ ಸುಬ್ಬಯ್ಯ

Public TV
1 Min Read

ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಯುಐ’ ಸಿನಿಮಾ ಡಿ.20ರಂದು ರಿಲೀಸ್ ಆಗುತ್ತಿದೆ. ರಿಲೀಸ್‌ಗೂ ಮುನ್ನವೇ ಟ್ರೈಲರ್, ಪೋಸ್ಟರ್‌ಗಳ ಮೂಲಕ ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದ ಭಾಗವಾಗಿರುವ ‘ಪಂಚರಂಗಿ’ ಬೆಡಗಿ ನಿಧಿ ಸುಬ್ಬಯ್ಯ ‘ಯುಐ’ ಚಿತ್ರದ ಭಾಗವಾಗೋದು ನನ್ನ ಅದೃಷ್ಟ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ನಾನು ಉಪೇಂದ್ರ ಸರ್ ಅವರ ದೊಡ್ಡ ಅಭಿಮಾನಿ. ನಿಮ್ಮ ಸಿನಿಮಾಗಳನ್ನು ನೋಡಿಕೊಂಡೆ ಬಂದಿರೋದು. ಯುಐ ಚಿತ್ರ ಒಂದೊಳ್ಳೆಯ ಅನುಭವ ಕಲಿಸಿ ಕೊಟ್ಟಿದೆ. ಸ್ಟೋರಿ ಹೇಳುವಾಗ ವಾವ್ ಉಪೇಂದ್ರ ಸರ್ ನನಗೆ ಕಥೆ ಹೇಳಿದ್ದೀರಾ ಅನಸ್ತು. ‘ಯುಐ’ ಚಿತ್ರದ ಭಾಗಿವಾಗಿರೋದು ನನ್ನ ಅದೃಷ್ಟ ಎಂದು ನಿಧಿ ಸುಬ್ಬಯ್ಯ (Nidhi Subbaiah) ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ವಿವಾದದ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ 1409 ಕೋಟಿ ಬಾಚಿದ ‘ಪುಷ್ಪ 2’

ಇದೇ ವೇಳೆ, ಬಿಗ್ ಬಾಸ್ ಖ್ಯಾತಿಯ ನೀತು ವನಜಾಕ್ಷಿ (Neethu Vanajakshi) ಮಾತನಾಡಿ, ಈ ಚಿತ್ರಕ್ಕೆ ಉಪೇಂದ್ರ ಸರ್ ನನಗೆ ನಟಿಸಲು ಅವಕಾಶ ಕೊಟ್ಟಿದ್ದಾರೆ. ಅದು ಹೆಮ್ಮೆಯ ಕ್ಷಣ ಎಂದೇ ಹೇಳಬಹುದು. ಅವರ ಡೈರೆಕ್ಷನ್‌ನಲ್ಲಿ ನಟಿಸಬೇಕು ಎಂಬುದು ಹಲವರ ಕನಸಾಗಿರುತ್ತದೆ. ಹೀಗಿರುವಾಗ ಅವರ ನಿರ್ದೇಶನದಲ್ಲಿ ನಟಿಸಲು ಚಾನ್ಸ್ ಸಿಕ್ಕಿರೋದು ನನ್ನ ಭಾಗ್ಯ ಎಂದಿದ್ದಾರೆ. ಪಾತ್ರದ ಬಗ್ಗೆ ಕೇಳಿದಾಗ, ಡಿ.20ರಂದು ಉತ್ತರ ಸಿಗುತ್ತದೆ ಎಂದು ನೀತು ಉತ್ತರಿಸಿದ್ದಾರೆ. ಈ ಮೂಲಕ ಸಿನಿಮಾ ಬಗ್ಗೆ ಯಾವುದೇ ಸುಳಿವು ಅವರು ಬಿಟ್ಟು ಕೊಟ್ಟಿಲ್ಲ.

ಈ ಕಾರ್ಯಕ್ರಮದಲ್ಲಿ ಶಿವಣ್ಣ, ಡಾಲಿ, ದುನಿಯಾ ವಿಜಯ್, ಡಾ.ಸೂರಿ, ಪವನ್ ಒಡೆಯರ್, ನಿರ್ಮಾಪಕ ರಮೇಶ್ ರೆಡ್ಡಿ, ಕೆಆರ್‌ಜಿ ರೂವಾರಿ ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ಉದಯ್ ಮೆಹ್ತಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

Share This Article