ಉಗ್ರಂ ಮಂಜು ಅಬ್ಬರಕ್ಕೆ ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್

Public TV
1 Min Read

ದೊಡ್ಮನೆಯ ಆಟ 90ನೇ ದಿನದತ್ತ ಮುನ್ನುಗ್ಗುತ್ತಿದೆ. ಪ್ರತಿವಾರ ವಿಭಿನ್ನ ಟಾಸ್ಕ್‌ಗಳನ್ನೇ ಕೊಡೋ ‌ʻಬಿಗ್‌ ಬಾಸ್’ (Bigg Boss Kannada 11) ಈ ಬಾರಿ ದೊಡ್ಮನೆಯನ್ನು ರೆಸಾರ್ಟ್ ಆಗಿ ಬದಲಿಸಿದ್ದಾರೆ. ಈ ರೆಸಾರ್ಟ್‌ನಲ್ಲಿ ಮೋಜು, ಮಸ್ತಿ ಮಾಡಲು ಭವ್ಯಾ ಗೌಡ (Bhavya Gowda) ಹಾಗೂ ಚೈತ್ರಾ ಕುಂದಾಪುರ (Chaithra Kundapura) ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಭವ್ಯಾ ಟೀಮ್‌, ರೆಸಾರ್ಟ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಾಗಿದ್ದು, ಚೈತ್ರಾ ಟೀಮ್ ಗೆಸ್ಟ್‌ಗಳಾಗಿದ್ದಾರೆ. ಅತಿಥಿಗಳು ತಮಗೆ ಬೇಕಾದ ರೀತಿಯಲ್ಲಿ ಕೆಲಸಗಾರರನ್ನು ನಡೆಸಿಕೊಳ್ತಿದ್ದಾರೆ. ಚೈತ್ರಾ ತಂಡದಲ್ಲಿರುವ ಉಗ್ರಂ ಮಂಜು ಕೊಡ್ತಿರುವ ಕಾಟಕ್ಕೆ, ಟಾರ್ಚರ್‌ಗೆ ಸೇವೆ ಮಾಡುವ ಸಿಬ್ಬಂದಿ ಸುಸ್ತಾಗಿದ್ದಾರೆ. ಇವರ ಕಾಟ ತಾಳಲಾರದೇ ರಜತ್‌ ಅವರು ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ್ದಾರೆ.

ಇತ್ತ ಎದುರಾಳಿ ತಂಡದ ವಿಪರಿತ ಕಾಟ ತಾಳಲಾರದೇ ರೆಸಾರ್ಟ್ ಮ್ಯಾನೇಜರ್ ಭವ್ಯಾ ಕಣ್ಣೀರಿಟ್ಟಿದ್ದಾರೆ. ಮಧ್ಯರಾತ್ರಿ ಏನೇ ಕೇಳಿದ್ರೂ ಮಾಡಿಕೊಡಬೇಕು ಎದುರಾಳಿ ತಂಡ ಹೇಳಿದ್ದಕ್ಕೆ ಭವ್ಯಾ ಅತ್ತಿದ್ದಾರೆ. ಇತ್ತ ಚೈತ್ರಾ ತಮ್ಮ ದರ್ಬಾರ್ ನಡೆಸಿದ್ದಾರೆ. ರಾತ್ರಿ ಲೈಟ್ಸ್ ಆಫ್ ಆದರೂ ನೀವು ನಮ್ಮ ಸೇವೆ ಮಾಡಬೇಕು. ಇನ್ನೂ ಐಶ್ವರ್ಯಾ ನನ್ನ ತಲೆ ಒತ್ತಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮಂಜು ನನಗೆ ಇವತ್ತು ಮ್ಯೂಜಿಕಲ್ ನೈಟ್ ಬೇಕು ಎಂದಿದ್ದಾರೆ. ಇತ್ತ ರೊಚ್ಚಿಗೆದ್ದಿರುವ ರಜತ್, ನಮಗೂ ಅವಕಾಶ ಸಿಗುತ್ತದೆ. ನಿಮ್ಮನ್ನು ಹಣ್ಣುಗಾಯಿ, ನೀರುಗಾಯಿ ಮಾಡಿಲ್ಲ ಅಂದ್ರೆ ನನ್ನ ಹೆಸರು ಬುಜ್ಜಿ ಅಲ್ಲ ನೋಡಿಕೋ ಎಂದು ಉಗ್ರಂ ಮಂಜುಗೆ ಖಡಕ್‌ ಆಗಿ ವಾರ್ನಿಂಗ್‌ ಕೊಟ್ಟಿದ್ದಾರೆ. ಒಟ್ನಲ್ಲಿ ಅಧಿಕಾರದ ದರ್ಪದಿಂದ ಮರೆಯುತ್ತಿರುವ ಚೈತ್ರಾ ಟೀಮ್ ಎದುರು ಭವ್ಯಾ ತಂಡ ಸೋತು ಸುಣ್ಣವಾಗಿರೋದಂತೂ ಗ್ಯಾರಂಟಿ.

Share This Article