ಯುಜಿಸಿಇಟಿ: ಆಪ್ಷನ್ಸ್ ದಾಖಲಿಸಲು ಜುಲೈ 22ರವರೆಗೆ ದಿನಾಂಕ ವಿಸ್ತರಣೆ-ಕೆಇಎ

Public TV
1 Min Read

ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಇಚ್ಛೆ/ಆಯ್ಕೆಗಳನ್ನು (ಆಪ್ಶನ್) ದಾಖಲಿಸಲು ಇದ್ದ ಕೊನೆ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಜುಲೈ 22ರವರೆಗೆ ವಿಸ್ತರಿಸಿದೆ.

ಎಂಜಿನಿಯರಿಂಗ್, ದಂತ ವೈದ್ಯಕೀಯ, ಪಶು ವೈದ್ಯಕೀಯ, ಕೃಷಿ ವಿಜ್ಞಾನ, ಬಿಎಸ್‌ಸಿ ನರ್ಸಿಂಗ್, ಬಿಪಿಟಿ, ಬಿಪಿಒ, ಎಹೆಚ್‌ಎಸ್ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಸರ್ಕಾರದಿಂದ ಬಂದಿದ್ದು, ಜುಲೈ 8ರಿಂದಲೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ಆದೇಶದಿಂದ ಅಡಕತ್ತರಿಯಲ್ಲಿ ಸಿಲುಕಿದ ಶಾಸಕ ಬೈರತಿ ಬಸವರಾಜ್

ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಫಾರ್ಮಸಿ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಸರ್ಕಾರದಿಂದ ಬಂದ ನಂತರ ಅವುಗಳಿಗೂ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು. ಕೊನೆ ದಿನಾಂಕದವರೆಗೆ ಎಷ್ಟು ಬಾರಿಯಾದರೂ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳಬಹುದು. ಆದರೆ ಅಂತಿಮವಾಗಿ ಬದಲಿಸಿದ್ದ ವಿವರಗಳನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ರಾಹುಲ್‌ನ ಜೈಲಿಗಟ್ಟುತ್ತೀನಿ, ದೇಶದ ಅನೇಕ ಜೈಲುಗಳು ಗಾಂಧಿ ಕುಟುಂಬಕ್ಕೆ ಕಾಯ್ತಿವೆ: ಅಸ್ಸಾಂ ಸಿಎಂ

ಸರ್ಕಾರ ನಿಗದಿಪಡಿಸಿರುವ ವಿವಿಧ ಕೋರ್ಸ್‌ಗಳ ಶುಲ್ಕದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಶುಲ್ಕ ವಿನ್ಯಾಸದಲ್ಲಿ ಏನಾದರು ಬದಲಾವಣೆಯಾದರೂ ಅದನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗುವುದು. ಅಭ್ಯರ್ಥಿಗಳು ಮೇಲಿಂದ ಮೇಲೆ ವೆಬ್‌ಸೈಟ್ ನೋಡುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Share This Article