ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ – ಕೆ.ಆರ್ ಮಾರ್ಕೆಟ್ ತುಂಬಾ ಜನವೋ ಜನ

1 Min Read

ಬೆಂಗಳೂರು: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ (Ugadi Festival) ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆ ಕೆಆರ್ ಮಾರ್ಕೆಟ್‌ನಲ್ಲಿ (KR Market) ಖರೀದಿ ಭರಾಟೆ ಜೋರಾಗಿದೆ.

ಮಧ್ಯರಾತ್ರಿಯಿಂದಲೇ ಕೆ.ಆರ್ ಮಾರ್ಕೆಟ್‌ನಲ್ಲಿ ವ್ಯಾಪಾರ ಆರಂಭಗೊಂಡಿದ್ದು, ಬೆಂಗಳೂರು ಅಕ್ಕಪಕ್ಕದ ಹೂವಿನ ಬೆಳೆಗಾರರು ನೇರ ಮಾರಾಟ ಮಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಆಗಮಿಸಿದ್ದು, ಹೂವು, ಹಣ್ಣು, ಮಾವಿನ ಸೊಪ್ಪು, ಬೇವಿನಸೊಪ್ಪು ಖರೀದಿಸಲು ಮುಗಿಬಿದ್ದಿದ್ದಾರೆ. ಸದ್ಯ ಹೂವು, ಹಣ್ಣಿನ ದರ ಕೊಂಚ ಏರಿದೆ.

ಹೂವು – ದರ:
ಮಲ್ಲಿಗೆ: 1,500- 1,800 ರೂ.
ಮಲ್ಲಿಗೆ ಹೂವಿನ ಹಾರ: 300-500 ರೂ.
ಸೇವಂತಿಗೆ: 200-250 ರೂ.
ಗುಲಾಬಿ: 250 ರೂ.
ಚೆಂಡು ಹೂ: 40-50 ರೂ.
ಒಂದು ಕಟ್ಟು ಬೇವಿನ ಸೊಪ್ಪು: 20 ರೂ.
ಒಂದು ಕಟ್ಟು ಮಾವಿನ ಸೊಪ್ಪು: 25 ರೂ.

Share This Article