ಯುಗಾದಿ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಸ್

Public TV
2 Min Read

ಯುಗಾದಿ (Ugadi Festival) ಎಂದರೆ ಹೊಸ ಆರಂಭ. ನಾಡಿನೆಲ್ಲೆಡೆ ಯುಗಾದಿ ಹಬ್ಬವನ್ನ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಿಂದೂಗಳ ಪಾಲಿಗೆ ಯುಗಾದಿ ಅಂದ್ರೆ ಹೊಸ ಸಂವತ್ಸರದ ಆರಂಭ. ಯುಗಾದಿ ಹಬ್ಬದಂದು ಬೇವು ಬೆಲ್ಲ ಸವಿದು ಕಷ್ಟ ಸುಖವನ್ನ ಸಮವಾಗಿ ಸ್ವೀಕರಿಸಲು ಎಲ್ಲರೂ ಸಜ್ಜಾಗುತ್ತಾರೆ. ಸ್ಯಾಂಡಲ್‌ವುಡ್ ತಾರೆಯರು (Sandalwood Stars) ಕೂಡ ತಮ್ಮ ಮನೆಯಲ್ಲೂ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ನ್ಯಾಷನಲ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಮನೆಯಲ್ಲಿ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಕುಟುಂಬದ ಜೊತೆ ಖುಷಿಯಿಂದ ಸೆಲೆಬ್ರೇಟ್ ಮಾಡಿದ್ದಾರೆ. ಜೋಡಿಯ ಸುಂದರ ಫೋಟೋವನ್ನು ಶೇರ್ ಮಾಡಿ ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಶುಭಕೋರಿದ್ದಾರೆ.

ಕನ್ನಡತಿ, ಟಾಲಿವುಡ್‌ನಲ್ಲಿ ಮಿಂಚುತ್ತಿರುವ ‘ರ‍್ಯಾಂಬೋ’ ಬೆಡಗಿ ಆಶಿಕಾ ರಂಗನಾಥ್ ಮನೆಯಲ್ಲೂ ಕೂಡ ಹಬ್ಬದ ಸಂಭ್ರಮ ಮನೆ ಮಾಡಿದೆ. ಶೂಟಿಂಗ್‌ಗೆ ಬ್ರೇಕ್ ಯುಗಾದಿ ಹಬ್ಬವನ್ನು ನಟಿ ಆಚರಿಸಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮನೆಯಲ್ಲಿಯೂ ಕೂಡ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ. ಮನೆ ಮಂದಿಯ ಜೊತೆ ಹಬ್ಬದೂಟ ಮಾಡಿ ಸಂಭ್ರಮಿಸಿದ್ದಾರೆ.

ಹೊಸ ಜೋಡಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಭುವನ್ ಅವರಿಗೂ ಈ ವರ್ಷ ಯುಗಾದಿ ಸಖತ್ ಸ್ಪೆಷಲ್. ಹಬ್ಬದ ನಡುವೆ ದೇವಸ್ಥಾನಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬೇವು ಬೆಲ್ಲದಂತೆ ಜೀವನದಲ್ಲಿ ಬರುವ ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸೋಣ. ಯುಗಾದಿ ಹಬ್ಬದ ಶುಭಾಶಯಗಳು ಎಂದು ಕಾಟೇರ ನಟಿ ಆರಾಧನಾ ರಾಮ್ (Aradhana Ram) ಶುಭ ಕೋರಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ದಿವ್ಯಾ ಉರುಡುಗ

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ನೂತನ ವರ್ಷ ನಿಮಗೆ ಹೆಚ್ಚು ಆನಂದ ಮತ್ತು ಸಮೃದ್ಧಿಯನ್ನು ತಂದಿರಲಿ. ಹೊಸ ಪ್ರಾರಂಭಗಳಿಗೆ ಹಾಗೂ ಹೊಸ ಅನುಭವಗಳಿಗೆ ಮುಂದೆ ಸಿದ್ಧವಾಗಿರಿ. ಹೊಸ ಸಂವತ್ಸರದ ಹಾರೈಕೆಯೊಂದಿಗೆ ನಮ್ಮ ಯುಗಾದಿ ಹಬ್ಬದ ಶುಭಾಶಯಗಳು ಎಂದು ನಭಾ ನಟೇಶ್ (Nabha Natesh) ಹಾರೈಸಿದ್ದಾರೆ.

ಯುಗಾದಿಯ ಶುಭಾಶಯಗಳು. ಈ ಹಬ್ಬದಲ್ಲಿ ನಿಮ್ಮ ಜೀವನಕ್ಕೆ ಸಮೃದ್ಧಿ, ಆನಂದ ಮತ್ತು ಆಶೀರ್ವಾದಗಳು ಬರಲಿ. ಹೊಸ ವರ್ಷವನ್ನು ಸಮೃದ್ಧಿಯಿಂದ ಸ್ವಾಗತಿಸೋಣ ಎಂದು ತುಪ್ಪದ ಬೆಡಗಿ ರಾಗಿಣಿ (Ragini) ಶುಭಹಾರೈಸಿದ್ದಾರೆ.

Share This Article