ಉಡುಪಿಯ ಪ್ರವಾಸಿ ಬೋಟ್ ದುರಂತ ಕೇಸ್; ಯೂಟ್ಯೂಬರ್ ನಿಶಾ, ಮಧು ಗೌಡ ಸ್ನೇಹಿತೆ ಸಾವು

1 Min Read

ಉಡುಪಿ: ಡೆಲ್ಟಾ ಬೀಚ್‌ನಲ್ಲಿ (Delta Beach Boat Accident) ಪ್ರವಾಸಿ ಬೋಟ್ ದುರಂತದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ದಿಶಾ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಮೈಸೂರಿನ ಉದಯಗಿರಿಯ ಜಲಾಪುರಿ ನಿವಾಸಿ ದಿಶಾ (23) ಮೃತ ದುರ್ದೈವಿ. ಘಟನೆಯಲ್ಲಿ ಸಿಂಧು, ಶಂಕರಪ್ಪ, ದಿಶಾ ಕೊನೆಯುಸಿರೆಳೆದಿದ್ದಾರೆ. ಧರ್ಮ ರಾಜ್ ಎಂಬ ಯುವಕನಿಗೆ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಉಡುಪಿಯಲ್ಲಿ ಮಗುಚಿದ ಬೋಟ್ – ಮೈಸೂರಿನ ಇಬ್ಬರು ಸಾವು, ಇನ್ನಿಬ್ಬರು ಗಂಭೀರ

ಡೆಲ್ಟಾ ಬೀಚ್‌ನಿಂದ ಟೂರಿಸ್ಟ್ ಬೋಟ್‌ನಲ್ಲಿ 28 ಮಂದಿ ಪ್ರವಾಸಿಗರು ತೆರಳಿದ್ದರು. ಮೈಸೂರಿನ ಬಿಪಿಓ ಒಂದರಲ್ಲಿ 28 ಮಂದಿ ಸಹೋದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಎರಡು ಪ್ರತ್ಯೇಕ ಬೋಟ್ ಗಳಲ್ಲಿ ತಲಾ 14 ಮಂದಿ ಯುವಕ-ಯುವತಿಯರು ತೆರಳಿದ್ದರು. ಒಂದು ಬೋಟ್ ಮಗುಚಿ ಸಮುದ್ರ ಪಾಲಾಗಿತ್ತು.

Share This Article