ಪ್ರಧಾನಿ ಮೋದಿಯ ಭವಿಷ್ಯ ನುಡಿದ ಪ್ರಕಾಶ್ ಅಮ್ಮಣ್ಣಾಯ

Public TV
2 Min Read

ಉಡುಪಿ: 2020ರ ಭವಿಷ್ಯ ಹೇಳೋದು ಬಹಳ ಸುಲಭ. ಒಂದು ಸಂಖ್ಯೆ ಹಲವನ್ನು ಹೇಳುತ್ತದೆ. ಅರ್ಧ ಸಿಹಿ, ಅರ್ಧ ಕಹಿ. ಟ್ವೆಂಟಿ ಟ್ವೆಂಟಿ ಒಂದು ಲೆಕ್ಕದಲ್ಲಿ ಫಿಫ್ಟಿ ಫಿಫ್ಟಿ ಇದ್ದಂತೆ ಎಂದು ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ. ಹಾಗಾದರೆ ಈ ವರ್ಷ ಮೋದಿಯ ಭವಿಷ್ಯವೇನು ಎಂದು ಕೇಳಿದರೆ ಅಮ್ಮಣ್ಣಾಯ ಅವರು ನೀಡುವ ಉತ್ತರ ಹೀಗಿದೆ..

ಪ್ರಧಾನಿ ನರೇಂದ್ರ ಮೋದಿಯ ಜಾತಕ: ಮೋದಿ ಯಾವುದಕ್ಕೂ ಹಿಂದೇಟು ಹಾಕುವ ಮನುಷ್ಯ ಅಲ್ಲ. ದಿಟ್ಟ ನಿರ್ಧಾರ ಮಾಡಿದವರು ಹಿಂದೆ ಬರಲ್ಲ. ಮೋದಿಯನ್ನು ಕೆರಳಿಸಬಾರದು. ಕೆರಳಿಸಿದರೆ ಕಷ್ಟವಾಗಬಹುದು. ಮೋದಿ ದೇಶಕ್ಕಾಗಿ ಶಾಸನ ಮಾಡುವ ವ್ಯಕ್ತಿ. ಅಡ್ಡಗಾಲು ಹಾಕಿದರೆ ಕಷ್ಟ ಶಾಸನ ಹೊರಡಬಹುದು. ಸುಖಾ-ಸುಮ್ಮನೆ ರಾಜಕೀಯ ಪ್ರೇರಣೆಯ ಪ್ರತಿಭಟನಾಕಾರರಿಗೆ ಶಾಸ್ತಿಯಾಗಲಿದೆ. ಮೋದಿಗೆ ಕಷ್ಟ ಕಾಲ ಬಂದರೂ ಅವರು ರಾಜೀನಾಮೆ ಕೊಡಲ್ಲ. ಆಲೋಚನೆ ಮಾಡಿ ಕ್ರಮ ತೆಗೆದುಕೊಳ್ಳುವವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮೋದಿಯ ಜಾತಕದಲ್ಲಿ ಚಂದ್ರದೆಸೆ. ಕುಜ-ಶುಕ್ರರ ನಡುವೆ ಪರಮ ಶತ್ರುಗಳು. ದೇಶದ ಅಲಂಕಾರಗಳನ್ನು, ಸ್ವತ್ತನ್ನು ವಿರೂಪ ಮಾಡಿದರೆ ಮೋದಿ ಕೆರಳುತ್ತಾರೆ. ಇದರಿಂದ ಶತ್ರುಗಳಿಗೆ ಉಳಿಗಾಲವಿಲ್ಲ. ಮೋದಿಯ ಚಾಣಾಕ್ಷತನ ಮತ್ತಷ್ಟು ಪ್ರಬಲವಾಗುತ್ತದೆ. ಮೋದಿಗೆ ಅಖಂಡ ಸಾಮ್ರಾಜ್ಯ ಯೋಗವಿದೆ. ಮೋದಿಗೆ ಪ್ರಶ್ನೆ ಮಾಡಬಹುದು, ಸೋಲಿಸಲಾಗದು. ವಿದೇಶಿ ಕೈವಾಡ ವಿಪಕ್ಷದ ಜೊತೆ ಸೇರಿಕೊಳ್ಳುತ್ತದೆ. ವಿದೇಶಗಳು ಭಾರತದ ವಿರುದ್ಧ ನಿಲ್ಲಬಹುದು. ಆದರೆ ಭಾರತವನ್ನು ಸೋಲಿಸಲು ಆಗದು. ರಾಹು ಕೇತುಗಳು ಮೋದಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದರೆ ಪ್ರಧಾನಿಗಳು ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸುವ ವ್ಯಕ್ತಿ. ಹಿಂಸಾಚಾರ ಸಾಧ್ಯತೆಯೂ ಇದೆ. 2020 ಸಿಹಿಯೂ ಕಹಿಯೂ ಪ್ರಾಪ್ತಿಯಾಗಲಿದೆ. 2021ರ ನಂತರ ಮೋದಿಯ ಆಡಳಿತದ ಸಿಹಿ ಸಿಗಲಿದೆ. ಎಲ್ಲರೂ ತಾಳ್ಮೆಯಿಂದ ಕಾಯಬೇಕು. ತಾಳ್ಮೆ ಕಳೆದುಕೊಳ್ಳಬಾರದು ಎಂದು ನುಡಿದಿದ್ದಾರೆ.

ವಿರೋಧಿಗಳಿಗೆ- ವಿಪಕ್ಷಕ್ಕೆ ಜಟಿಲ ಕಾಲ. ವಿಪಕ್ಷ ಮೋದಿಯ ವಿರುದ್ಧ ಗೆಲ್ಲೋದಿಲ್ಲ. ಮೋದಿ ದೇಶಕ್ಕಾಗಿ, ಜನರಿಗಾಗಿ ಜೀವನ ಮುಡಿಪಾಗಿಟ್ಟವರು ಎಂದು ಹೇಳಿದ್ದಾರೆ.

ಶನಿ ಮಕರ ರಾಶಿ ಪ್ರವೇಶ. ಗುರು ಕೂಡ ಮಕರ ರಾಶಿಯ ಪ್ರವೇಶವಾಗುವ ಕಾಲ. ಸೂರ್ಯ ಚಂದ್ರರ ಪರಿಣಾಮದಂತೆ ಈ ಗ್ರಹಗಳ ಸಂಚಾರ ಭೂಮಿಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ತೊಂದರೆಗಳು, ಒಳ್ಳೆಯ ಕಾಲಗಳು ಬರುತ್ತದೆ ಎಂದು ತಿಳಿಸಿದ್ದಾರೆ.

2020 ಹೊಸವರ್ಷ ಎಂದು ಕರೆದರೂ ಹಿಂದೂಗಳ ಪಂಚಾಂಗ ಪ್ರಕಾರ ಹೊಸ ವರ್ಷ ಅಲ್ಲ. ಭಾರತೀಯ ಪಂಚಾಂಗ ಪ್ರಕಾರ ಇದು ಹೊಸವರ್ಷ ಅಲ್ಲ. ಅರ್ಧ ರಾತ್ರಿಗೆ ಒಂದು ದಿವಸದ ಲೆಕ್ಕವಿದೆ. ನಮ್ಮದು ಸೂರ್ಯೋದಯದ ಲೆಕ್ಕಾಚಾರ. ಆದರೂ ವಿಶ್ವಕ್ಕೆ ಹೊಸ ವರ್ಷ ಆಗಿರೋದರಿಂದ ಒಂದು ಕ್ಷಣದ ದುಃಖ, ಒಂದು ಕ್ಷಣದ ಖುಷಿಗಳು ಬರಬಹುದು. ಖುಷಿ ಮತ್ತು ಬೇಸರಗಳು ಬಹಳ ಕಾಲ ಉಳಿಯದೆ ಬದಲಾಗುತ್ತಿರಬಹುದು. ದಾನವರ ಸಂಭ್ರಮದ ರೀತಿ ಆಗಬಹುದು. ಆದರೆ ಅದರಲ್ಲಿ ಲಾಭವಿಲ್ಲ ಎಂದಿದ್ದಾರೆ.

2019ರ ಕಾರ್ಯ 2020ರಲ್ಲಿ ಫಲ: ಬಂಧನಗಳು ಆಗುವ ಸಾಧ್ಯತೆ ಇದೆ. ದೊಡ್ಡ ವ್ಯಕ್ತಿಗಳು ಬಂಧನಗಳಾಗುತ್ತದೆ. ಅಪರಾಧ ಮಾಡುವವರಿಗೆ ಕಷ್ಟಕಾಲ. ಅಕ್ರಮಗಳು ಸಾಬೀತಾಗುತ್ತದೆ. ಕಾನೂನಿನ ವಿರುದ್ಧ ಹೋದವರಿಗೆಲ್ಲ ಕಷ್ಟಕಾಲ. ಅಕ್ಟೋಬರ್ ನಂತರದ ಕಾಲದಲ್ಲಿ ಹೀಗೆಲ್ಲ ಆಗುತ್ತದೆ. ಧರ್ಮಭ್ರಷ್ಟರಿಗೆ ಶುಭಕಾಲ ಇಲ್ಲ. ಕಾನೂನಿಗೆ ವಿರೋಧ ಮಾಡಿದವರಿಗೆ ಕಷ್ಟಕಾಲ ಬರುತ್ತದೆ. ಸಿಎಎ, ಎನ್.ಆರ್.ಸಿಗಳ ವಿರುದ್ಧ ಹೋದವರಿಗೆ ಕೆಟ್ಟ ಫಲ ಸಿಗಲಿದೆ. ಕಾನೂನು ಧಿಕ್ಕರಿಸಿ ವಿರೋಧಿಸಿದವರಿಗೆ ಬಂಧನ, ಅಪಾಯ ಬರಬಹುದು. 2-3 ಪೌರತ್ವ ಇರುವವರು ಕಷ್ಟಕ್ಕೊಳಗಾಗುತ್ತೀರಿ. ಅಮಾಯಕರು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ. ಮುಂದೆ ಫಲಸಿಕ್ಕಿ ಹೊರ ಬರುತ್ತಾರೆ ಅಂತ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *