ಉಡುಪಿ: ಮಳೆಯ ಪ್ರಮಾಣದಲ್ಲಿ ಉಡುಪಿ (Udupi) ಜಿಲ್ಲೆಯು ಮೇಘಾಲಯದ ಚಿರಾಪುಂಜಿ (Cherrapunji) ಹಾಗೂ ಆಗುಂಬೆಯನ್ನು ಹಿಂದಿಕ್ಕಿದೆ. ಜೂನ್ ತಿಂಗಳಿನಲ್ಲಿ ಹೆಚ್ಚು ಮಳೆ ಉಡುಪಿಯಲ್ಲಿ ಬಿದ್ದಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಜೂನ್ ತಿಂಗಳ ಮಳೆಯ ಲೆಕ್ಕಾಚಾರ ನೋಡಿದಾಗ ಉಡುಪಿ ಜಿಲ್ಲೆಯು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಈ ತಿಂಗಳಲ್ಲಿ ಕರಾವಳಿ ಜಿಲ್ಲೆಯಲ್ಲಿ ದಾಖಲೆಯ ಮಳೆ ಸುರಿದಿದೆ. ಒಂದು ತಿಂಗಳಲ್ಲಿ 1,140 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ 4,300 ಮಿ.ಮೀ ಮಳೆಯಾಗುವ ವಾಡಿಕೆಯಿದ್ದು, ಈ ಬಾರಿ ದಾಖಲೆಯ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಸಿಎಂ ವಿರುದ್ಧ ದೂರು ನೀಡಿಲ್ಲವೇಕೆ?: ವಿಜಯೇಂದ್ರ
ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ಕಳೆದ ಒಂದುವರೆ ತಿಂಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳೆದ ಎರಡು ದಶಕಗಳಲ್ಲಿ ಈ ವರ್ಷ ಸುರಿದ ಮಳೆ ಅತಿ ಹೆಚ್ಚು ಎಂಬುದು ಕೂಡಾ ಒಂದು ದಾಖಲಾಗಿದೆ. ಈ ನಡುವೆ ದೇಶದಲ್ಲೇ ಉಡುಪಿ ಜಿಲ್ಲೆ ಅತಿ ಹೆಚ್ಚು ಮಳೆ ಬಿದ್ದ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದನ್ನೂ ಓದಿ: ಕಾರು ರೇಸ್‌ಗೆ ಕಿಚ್ಚ ಎಂಟ್ರಿ – ಬೆಂಗಳೂರು ತಂಡ ಖರೀದಿಸಿದ ಸುದೀಪ್
ಮೇಘಾಲಯದ ಚಿರಾಪುಂಜಿ ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ ಎಂಬ ದಾಖಲೆ ಹೊತ್ತಿದೆ. ಪ್ರತಿ ವರ್ಷ ಚಿರಾಪುಂಜಿಯಲ್ಲಿ ಭಾರೀ ಮಳೆ ಆಗುತ್ತದೆ. ಕರ್ನಾಟಕದಲ್ಲಿ ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಎಂದು ಕರೆಯುತ್ತಾರೆ. ಆಗುಂಬೆಯಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ. ಆದರೆ ಈ ಬಾರಿ ಉಡುಪಿಯಲ್ಲಿ ಸುರಿದ ಮಳೆಯು ಮೇಘಾಲಯದ ಚಿರಪುಂಜಿ ಮತ್ತು ಕರ್ನಾಟಕದ ಆಗುಂಬೆಯನ್ನು ಹಿಂದಿಕ್ಕಿದೆ.
ಹವಾಮಾನ ಇಲಾಖೆ ಬಿಡುಗಡೆಗೊಳಿಸಿದ ದಾಖಲೆ ಪ್ರಕಾರ ಜೂನ್ ತಿಂಗಳ 27ರಂದು ಈ ದಾಖಲೆ ಸೃಷ್ಟಿಯಾಗಿದೆ. ಇದಾಗಿ ಮೂರು ದಿನ ಉಡುಪಿ ಜಿಲ್ಲೆಯಲ್ಲಿ 150 ಮಿ.ಮೀ.ಗೂ ಹೆಚ್ಚು ಮಳೆಯಾಗಿರುವುದು ಬಹುದೊಡ್ಡ ದಾಖಲೆಯಾಗಿದೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – ಕತಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್
ಮೂರು ತಾಲೂಕಿನಲ್ಲಿ ಪಶ್ಚಿಮ ಘಟ್ಟದ ತಪ್ಪಲು, ಐದು ತಾಲೂಕಿನಲ್ಲಿ ಸಮುದ್ರವನ್ನು ಆವರಿಸಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ 4,300 ಮೀ.ಮೀ ಸರಾಸರಿ ಮಳೆಯಾಗುತ್ತದೆ. ಈ ವರ್ಷ ಮೇ 15ರ ನಂತರ ಪೂರ್ವ ಮುಂಗಾರು ಮಳೆ ಅಬ್ಬರದಿಂದ ಸುರಿದಿದೆ. ಅಲ್ಲದೇ ಚಂಡಮಾರುತದಿಂದ ಭಾರೀ ಮಳೆಯಾಗಿತ್ತು. ಇದಾದ ಬೆನ್ನಲ್ಲೇ ಮುಂಗಾರು ಮಳೆ ಆರಂಭವಾಗಿತ್ತು.
ಎಲ್ಲಿ ಎಷ್ಟು ಮಳೆ?
ಜೂನ್ ತಿಂಗಳಿನಲ್ಲಿ ಉಡುಪಿಯಲ್ಲಿ ಅತಿ ಹೆಚ್ಚು ಮಳೆಯಾದರೆ, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ. ದ.ಕದಲ್ಲಿ ಒಂದು ತಿಂಗಳಲ್ಲಿ 980 ಮಿ.ಮೀ ದಾಖಲೆಯ ಮಳೆ ಸುರಿದಿದೆ. ಇದನ್ನೂ ಓದಿ: ಬೋಲ್ಡ್ ಫೋಟೋಗೆ ಬ್ಯಾಡ್ ಕಾಮೆಂಟ್, ಗೌರಮ್ಮನಾದ ಸಪ್ತಮಿ!
ಇನ್ನು ಕೇರಳದ ಕಣ್ಣೂರು (Kannur) ಜಿಲ್ಲೆಯಲ್ಲಿ 902 ಮಿ.ಮೀ ಮಳೆಯಾಗಿದ್ದು, ಇದು ಮೂರನೇ ಸ್ಥಾನದಲ್ಲಿದೆ. ಮೇಘಾಲಯದ ಸೌತ್ ವೆಸ್ಟ್ ಕಾಶಿ ಹಿಲ್‌ನಲ್ಲಿ 880 ಮಿ.ಮೀ ಮಳೆಯಾಗಿದೆ. ದಾದರ್ ಮತ್ತು ನಗರ ಹವೇಲಿಯಲ್ಲಿ 858 ಮಿ.ಮೀ ಮಳೆಯಾಗಿದೆ. ಈ ಮೂಲಕ ಈ ವರ್ಷದ ಜೂನ್ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ದಾಖಲೆ ನಿರ್ಮಾಣವಾಗಿದೆ. ಇದನ್ನೂ ಓದಿ: 46 ರೂ. ಆಗಿದ್ರೂ 50 ರೂ. ಟಿಕೆಟ್ – ಭಾರೀ ಟೀಕೆ ಬೆನ್ನಲ್ಲೇ KSRTC ಆದೇಶ ರದ್ದು
ಕಳೆದ ಒಂದುವರೆ ತಿಂಗಳಿಂದ ಉಡುಪಿ ಜಿಲ್ಲೆಯಲ್ಲಿ 15 ದಿನಕ್ಕೂ ಹೆಚ್ಚು ದಿನ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಸುಮಾರು 15 ದಿನಕ್ಕೂ ಹೆಚ್ಚು ಆರೆಂಜ್ ಅಲರ್ಟ್ ಮತ್ತು ಯೆಲ್ಲೋ ಅಲರ್ಟ್ ಕೂಡಾ ಘೋಷಣೆ ಆಗಿತ್ತು. ಸಹಜವಾಗಿ ಅಲರ್ಟ್ ಇದ್ದಾಗ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ದಾಖಲಾಗಿದೆ. ಈ ಸಂದರ್ಭ ನದಿ, ಸಮುದ್ರ ಪಾತ್ರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಂಪೂರ್ಣವಾಗಿ ನಿಷೇಧ ವಿಧಿಸಲಾಗಿತ್ತು. ಅಲ್ಲದೇ ಒಂದು ತಿಂಗಳಿಂದ ಮೀನುಗಾರಿಕೆಗೂ ನಿರ್ಬಂಧ ಹೇರಲಾಗಿತ್ತು.