ಲಕ್ಷ್ಮಿ ಹೆಬ್ಬಾಳ್ಕರ್ ಎದುರೇ ಸುನಿಲ್ ಕುಮಾರ್, ಎಸ್‍ಪಿ ಅರುಣ್ ನಡುವೆ ಮಾತಿನ ಜಟಾಪಟಿ

Public TV
1 Min Read

ಉಡುಪಿ: ಮಾಜಿ ಸಚಿವ ಸುನಿಲ್ ಕುಮಾರ್ (Sunil Kumar) ಹಾಗೂ ಎಸ್‍ಪಿ ಡಾ.ಅರುಣ್ ಅವರ ನಡುವೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಇದ್ದ ಕೆಡಿಪಿ ಸಭೆಯಲ್ಲೇ ಮಾತಿನ ಜಟಾಪಟಿ ನಡೆದಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಜಿಲ್ಲೆಯಲ್ಲಿ ಲಾರಿ ಮುಷ್ಕರದ ಪ್ರತಿಭಟನಾಕಾರರಿಗೆ ಎಸ್‍ಪಿ ನೋಟಿಸ್ ನೀಡಿದ ವಿಚಾರದಲ್ಲಿ ಇಬ್ಬರ ನಡುವೆ ವಾದ ನಡೆದಿದೆ.

ಈ ಹಿಂದೆ ಹೆದ್ದಾರಿಯಲ್ಲಿ ಲಾರಿ ಮುಷ್ಕರ ಮಾಡಿದ್ದ ಕಾರ್ಮಿಕರ ಮೇಲೆ ಎಸ್‍ಪಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಸುನೀಲ್ ಕುಮಾರ್, ಪ್ರತಿಭಟನೆ ಹೇಗೆ ಮಾಡಬೇಕು ಎಂದು ನೀವು ನಿರ್ಧರಿಸುತ್ತೀರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂದು ನಿಬಂಧನೆಗಳನ್ನು ಹೇಳಿ, ನಾವು ಮನೆಯಲ್ಲಿ ಕೂತು ಭಜನೆ ಮಾಡಬೇಕಾ? ನಮ್ಮ ಜಿಲ್ಲೆಯಲ್ಲಿ ಹೇಗೆ ಪ್ರತಿಭಟನೆ ಮಾಡಬೇಕೆಂದು ನೀವೇ ಹೇಳಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಗುವಿಗೆ ಕುಕ್ಕಿದ ಕೋಳಿ- ಶಾಲೆಗೆ ಬೀಗ ಜಡಿದು ಪ್ರತಿಭಟನೆ

ಮಾಜಿ ಸಚಿವರ ಮಾತಿಗೆ ಎಸ್‍ಪಿ ತಿರುಗೇಟು ನೀಡಿದ್ದು, ನಾನು ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತೇನೆ. ಇದೇ ವಿಚಾರದಲ್ಲಿ ಕೆಲ ನಿಮಿಷಗಳ ಕಾಲ ಮಾತಿನ ಜಟಾಪಟಿ ನಡೆಯಿತು. ಲಾರಿಯವರು ಕೋರ್ಟ್‍ಗೆ ಹೋಗಲಿ ಎಂದು ಉತ್ತರ ನೀಡಿದರು.

ಬಳಿಕ ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್ ಮಧ್ಯ ಪ್ರವೇಶಿಸಿ, ಸುನಿಲ್ ಕುಮಾರ್ ಅವರನ್ನು ಸಮಾಧಾನಪಡಿಸಿದರು. ಅಲ್ಲದೇ ಸಾಕು ಸುಮ್ನಿರಪ್ಪಾ, ಜಾಸ್ತಿ ಆಯ್ತು ಎಂದು ಎಸ್‍ಪಿ ಅವರನ್ನು ಸುಮ್ಮನಿರಿಸಿದ್ದಾರೆ. ಇದನ್ನೂ ಓದಿ: ಸ್ಪೀಕರ್‌ ಅನುಮತಿ ಇಲ್ಲದೇ ಡಿಕೆಶಿ ಕೇಸ್‌ ತನಿಖೆಗೆ ಆದೇಶಿಸಿರುವುದು ಕಾನೂನುಬಾಹಿರ: ಸಿದ್ದರಾಮಯ್ಯ

Share This Article