ಅಮ್ಮನ ಅಡುಗೆ, ಅಪ್ಪ- ಅಣ್ಣನ ಟಿಪ್ಸ್: ಉಡುಪಿಯ ಮನೋಜ್ ರಾಜ್ಯಕ್ಕೆ ಮೂರನೇ ಸ್ಥಾನ

Public TV
2 Min Read

ಉಡುಪಿ: ಇಂದ್ರಾಳಿ ಇಂಗ್ಲೀಷ್ ಮೀಡಿಯಂ ನ ಮನೋಜ್ ಎಂ ಮಲ್ಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಬಂದಿದ್ದಾನೆ. ಈತನ ಸಾಧನೆಗೆ ಅಪ್ಪ ಅಣ್ಣನ ಟಿಪ್ಸ್. ಅಮ್ಮನ ರುಚಿಕರ ಕೈ ಅಡುಗೆಯೇ ಕಾರಂವಂತೆ.

ಉಡುಪಿಯ ಮನೋಜ್ ಮಲ್ಯನ ತಾಯಿ ಜಯಶ್ರೀ ಎಲ್‍ಐಸಿ ಉದ್ಯೋಗಿ. ಪರೀಕ್ಷೆ ಸಂದರ್ಭ ತಾಯಿ 10 ದಿನ ರಜೆ ಹಾಕಿದ್ದಾರೆ. ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೆ ಮಗನಿಗೆ ಸೂಕ್ತ ಸಮಯಕ್ಕೆ ಬೇಕಾದ ಎಲ್ಲಾ ತಿಂಡಿ, ಊಟ, ಜೂಸ್, ಮನಸ್ಸು ಮತ್ತು ದೇಹವನ್ನು ಹತೋಟಿಯಲ್ಲಿಡುವಂತಹ ಸಾತ್ವಿಕ ಆಹಾರ ತಯಾರಿ ಮಾಡಿಕೊಟ್ಟಿದ್ದಾರೆ.

ಊಟ ತಿಂಡಿಯನ್ನು ಸರಿಯಾದ ಸಮಯದಲ್ಲಿ ಮಾಡಿಕೊಡೋದ್ರಿಂದ ಆ ಬಗ್ಗೆ ಮಕ್ಕಳಿಗೆ ಚಿಂತೆ ಇರೋದಿಲ್ಲ. ಮನಸ್ಸು ಬೇರೆಡೆ ಸೆಳೆಯುವುದಿಲ್ಲ. ಆರೋಗ್ಯ ಚೆನ್ನಾಗಿದ್ದರೆ, ಅದೂ ಈ ಬಿಸಿಲಿನಲ್ಲಿ ಅದನ್ನು ಸರಿಯಾಗಿ ಮೈನ್ಟೇನ್ ಮಾಡಿದ್ರೆ ಓದಿನ ಕಡೆ ಪರೀಕ್ಷೆಯ ಕಡೆ ಗಮನ ಕೊಡಬಹುದು ಅಂತ ಜಯಶ್ರೀ ಹೇಳಿದ್ದಾರೆ.

ಮನೋಜ್ ತಂದೆ ಮಣಿಪಾಲ ವಿವಿಯಲ್ಲಿ ಪ್ರೊಫೆಸರ್. ಆಟದ ಜೊತೆ ಪಾಠ ಓದಿದ್ದೆ ಈ ಸಾಧನೆಗೆ ಕಾರಣ ಅಂತಾನೆ ಮನೋಜ್ ಮಲ್ಯ. ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದಬೇಕೆಂಬ ಹಂಬಲ ಇಟ್ಟುಕೊಂಡಿದ್ದಾನೆ. ಸದ್ಯ ಮೈಸ್ ನಲ್ಲಿ ಕೋಚಿಂಗ್ ಪಡೆಯುತ್ತಿರುವ ಈತ, ಪಿಸಿಎಂಎಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾನೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮನೋಜ್ ಮಲ್ಯ, ದಿನಕ್ಕೆ ನಾಲ್ಕು ಗಂಟೆ ಓದುತ್ತಿದ್ದೆ. ರಾತ್ರಿ 11 ಗಂಟೆ ಮೇಲೆ ಓದುತ್ತಿರಲಿಲ್ಲ. ಹೆಚ್ಚು ಒತ್ತಡ ಹಾಕಿಕೊಂಡು ಓದಿದ್ರೆ ಸ್ಕೋರ್ ಮಾಡೋದಿಕ್ಕೆ ಆಗಲ್ಲ. ಶಾಲೆಯಲ್ಲಿ ಒಳ್ಳೆಯ ಸಪೋರ್ಟ್ ಮಾಡ್ತಿದ್ದರು. ತಾಯಿ ನನ್ನ ಜೊತೆ ಕೂತು ಓದುತ್ತಿದ್ದರು. ತಂದೆ ಪ್ರೊಫೆಸರ್ ಆಗಿರೋದ್ರಿಂದ ಕೆಲವು ಟಿಪ್ಸ್ ಎಲ್ಲಾ ಸಿಗ್ತಾಯಿತ್ತು. ನನ್ನ ಅಣ್ಣ ಕೂಡಾ ನನಗೆ ಮೆಂಟರ್. ಅವನು ಜಿಲ್ಲೆಗೆ ಮೂರನೇ ಸ್ಥಾನ ಗಳಿಸಿದ್ದ. ಇದೂ ನನಗೆ ಹೆಲ್ಪ್ ಆಯ್ತು. ಬ್ಯಾಡ್ಮಿಂಟನ್ ನಲ್ಲಿ ಮೂರು ವರ್ಷ ತೊಡಗಿಸಿಕೊಂಡಿದ್ದೆ. 10 ನೇ ಕ್ಲಾಸಲ್ಲಿ ಆಟ ಬಿಟ್ಟು ಪಾಠದ ಕಡೆ ಮಾತ್ರ ಗಮನ ಕೊಟ್ಟಿರುವುದರಿಂದ ಈ ಅಂಕ ಬರಲು ಸಾಧ್ಯವಾಯ್ತು ಅಂತ ಹೇಳಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *