ಉಡುಪಿ: ಕಾಂತಾರ (Kantara) ಚಿತ್ರದ ಕಂಬಳದ ದೃಶ್ಯದಲ್ಲಿ ರಿಷಬ್ ಶೆಟ್ಟಿ (Rishab Shetty) ಜೊತೆ ಕಾಣಿಸಿಕೊಂಡಿದ್ದ ಅಪ್ಪು ಕೋಣ (Appu Buffalo) ಸಾವನ್ನಪ್ಪಿದೆ.
ಅಪ್ಪು ಕೋಣವು ಕಾಂತಾರ ಚಿತ್ರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಜೊತೆ ತೆರೆಯಲ್ಲಿ ಮಿಂಚಿತ್ತು. ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಅಪ್ಪು ಕೋಣವನ್ನು ಸಾಕಿದ್ದರು. ಚಿತ್ರೀಕರಣಕ್ಕೆ ಅಪ್ಪು ಮತ್ತು ಕಾಳ ಎನ್ನುವ ಕೋಣಗಳ ಮೂಲಕ ತರಬೇತಿ ನೀಡಲಾಗಿತ್ತು. ಇದನ್ನೂ ಓದಿ: 3.15 ಕೋಟಿ ವಂಚನೆ ಆರೋಪ; ನಟ ಧೃವ ಸರ್ಜಾ ವಿರುದ್ಧ ಎಫ್‌ಐಆರ್
ಪರಮೇಶ್ವರ ಭಟ್‌ರ ಮಗಳಾದ ಚೈತ್ರಾ ಪರಮೇಶ್ವರ ಭಟ್ ಅವರ ಆರೈಕೆಯಲ್ಲಿ ಅಪ್ಪು ಮತ್ತು ಕಾಳ ಎನ್ನುವ ಕೋಣಗಳು ಬೆಳೆದಿದ್ದವು. ಕರಾವಳಿಯ ಬಹುತೇಕ ಕಂಬಳಗಳಲ್ಲಿ ಭಾಗಿಯಾಗಿ, ಬಹುಮಾನ ಸಂಪಾದಿಸಿದ್ದ ಕೋಣ ಅಪ್ಪು ಇನ್ನಿಲ್ಲ.