ಉಡುಪಿ ಕಾಲೇಜಿನ ವೀಡಿಯೋ ಪ್ರಕರಣ- ಗುಜರಾತ್ FSLಗೆ ರವಾನೆ ಸಾಧ್ಯತೆ

Public TV
2 Min Read

ಉಡುಪಿ: ಪ್ಯಾರಾಮೆಡಿಕಲ್ ಕಾಲೇಜಿನ (Paramedical College) ಟಾಯ್ಲೆಟ್ ವೀಡಿಯೋ ಪ್ರಕರಣ ಮಹತ್ವದ ಘಟ್ಟದಲ್ಲಿದೆ. ಉಡುಪಿಯಲ್ಲಿ ಮೊದಲ ಹಂತದ ಸಿಐಡಿ ತನಿಖೆ ಪೂರೈಸಿದ್ದಾರೆ. ಈ ನಡುವೆ ಬೆಂಗಳೂರು ಎಫ್‍ಎಸ್‍ಎಲ್‍ನಲ್ಲಿ ವೀಡಿಯೋ ರಿಟ್ರೀವ್ ಆಗದಿದ್ದರೆ, ಆರೋಪಿತ ವಿದ್ಯಾರ್ಥಿನಿಯರ ಮೊಬೈಲ್ ಗಳನ್ನು ಗುಜರಾತ್ ಎಫ್‍ಎಸ್‍ಎಲ್‍ಗೆ (FSL) ಕಳುಹಿಸಲು ತಯಾರಿ ನಡೆಸಲಾಗಿದೆ.

ಉಡುಪಿಯ (Udupi) ಪ್ಯಾರಾಮೆಡಿಕಲ್ ಕಾಲೇಜಿನ ವಿಡಿಯೋ ಪ್ರಕರಣದ ಮೊದಲ ಹಂತದ ಸಿಐಡಿ ತನಿಖೆ ಪೂರ್ಣಗೊಂಡಿದೆ. ಸಿಐಡಿ ಅಧಿಕಾರಿಗಳು ಎಫ್ ಎಸ್ ಎಲ್ ವರದಿಗೆ ಕಾಯುತ್ತಿದ್ದಾರೆ. ಆರೋಪಿತ ವಿದ್ಯಾರ್ಥಿನಿಯರಿಂದ ಪಡೆದ ಮೊಬೈಲ್ ಗಳಿಂದ ವೀಡಿಯೋಗಳನ್ನು ರಿಟ್ರೀವ್ ಮಾಡಲು ಬೆಂಗಳೂರು ಎಫ್‍ಎಸ್‍ಎಲ್ ಗೆ ಕಳುಹಿಸಲಾಗಿದೆ. ಯಾವುದೇ ವಿಡಿಯೋಗಳು ಲಭ್ಯವಾಗದಿದ್ದರೆ ಮೊಬೈಲ್ ಗಳನ್ನು ಗುಜರಾತ್ ಗೆ (Gujrath) ಕಳುಹಿಸಬೇಕಾಗುತ್ತದೆ. ಮೂರು ವಾರಗಳ ಹಿಂದೆ ಉಡುಪಿ ಪೊಲೀಸರು ಎಫ್ ಎಸ್ ಎಲ್ ಗೆ ಮೊಬೈಲ್ ಕಳುಹಿಸಿದ್ದರು. ಬೆಂಗಳೂರಿನಲ್ಲಿ ಇರುವ ತಾಂತ್ರಿಕತೆಯನ್ನು ಬಳಸಿಕೊಂಡು ರಿಟ್ರೀವ್ ಮಾಡಲು ಪ್ರಯತ್ನ ನಡೆಸಲಾಗಿದೆ. ಇದು ಸಾಧ್ಯವಾಗದಿದ್ದರೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವೀಡಿಯೋ ರಿಟ್ರೀವ್ ಮಾಡಲು ಸಿಐಡಿ ಪೊಲೀಸರು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಮೊಬೈಲ್ ಗಳನ್ನು ಗುಜರಾತ್ ಫೋರೆನ್ಸಿಕ್ ಲ್ಯಾಬೋರೇಟರಿಗೆ ರವಾನಿಸುವ ಸಾಧ್ಯತೆ ಇದೆ.

ವಿದ್ಯಾರ್ಥಿನೀಯರ ಡಿಲೀಟ್ ಮಾಡಿರುವ ವೀಡಿಯೋ ಯಾವುದು? ಅದರಲ್ಲಿ ಏನಿದೆ ಅನ್ನೋದೇ ಸಿಐಡಿಗೆ ಪ್ರಾಮುಖ್ಯವಾಗಿದೆ. ಐ ಫೋನ್ ಮೊಬೈಲ್ ಗಳಲ್ಲಿ ಡಿಲೀಟ್ ಆದ ವಿಡಿಯೋಗಳನ್ನು ರಿಟ್ರೀವ್ ಮಾಡುವುದು ಸುಲಭ ಇಲ್ಲ. ಮೊದಲ ಹಂತದ ಸಿಐಡಿ ತನಿಖೆ ಪೂರ್ಣಗೊಂಡಿದೆ. ಒಂದು ವಾರಗಳ ಕಾಲ ಎಡಿಜಿಪಿ, ಹಾಗೂ ಎಸ್ ಪಿ ನೇತೃತ್ವದಲ್ಲಿ ತನಿಖಾಧಿಕಾರಿಯಾಗಿರುವ ಡಿವೈಎಸ್‍ಪಿ ಅಂಜು ಮಾಲ ತನಿಖೆ ಪೂರೈಸಿದ್ದಾರೆ. ಸಂತ್ರಸ್ತೆಯಿಂದ ಹೇಳಿಕೆ ಪಡೆದಿದ್ದಾರೆ. ಆರೋಪಿತ ವಿದ್ಯಾರ್ಥಿನಿಯರನ್ನು ಸಖಿ ಕೇಂದ್ರಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ನ್ಯಾಯಾಲಯದಿಂದ ಸಂತ್ರಸ್ತೆ ಹಾಗೂ ಆರೋಪಿತ ವಿದ್ಯಾರ್ಥಿನಿ ನೀಡಿರುವ ಹೇಳಿಕೆಗಳ ಪ್ರತಿಯನ್ನು ಪಡೆಯಲಾಗಿದೆ. ಸರ್ಚ್ ವಾರೆಂಟ್ ಪಡೆದು ಆರೋಪಿತರ ಮನೆಯ ಮಹಜರು ಪೂರೈಸಿದ್ದರೂ ಎಫ್ ಎಸ್ ಎಲ್ ವರದಿ ಮುಖ್ಯವಾಗಿದೆ. ಇದನ್ನೂ ಓದಿ: ಟ್ಯೂಶನ್ ಮುಗಿಸಿ ಹೋಗ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ – ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವು

ತನಿಖೆ ಪೂರ್ಣವಾಗಲು ಎಫ್ ಎಸ್ ಎಲ್ ವರದಿಯೇ ಪ್ರಾಮುಖ್ಯವಾಗಿದೆ. ಉನ್ನತ ಮಟ್ಟದ ಪರಿಶೀಲನೆಗೆ ಗುಜರಾತ್ ಗೆ ಮೊಬೈಲ್ ಗಳನ್ನು ಕಳುಹಿಸುವ ಬಗ್ಗೆ ಸಿಐಡಿ ನಿರ್ಧರಿಸುವ ಸಾಧ್ಯತೆ ಇದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್