ಬಂಡಾಯ ಶಾಸಕರ ಪತ್ನಿಯರಿಗೆ ಉದ್ಧವ್ ಠಾಕ್ರೆ ಹೆಂಡ್ತಿ ಕರೆ

Public TV
1 Min Read

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರು ಗುವಾಹಟಿಯ ಹೋಟೆಲ್‍ನಲ್ಲಿ ತಂಗಿರುವ ಕೆಲವು ಬಂಡಾಯ ಶಾಸಕರ ಪತ್ನಿಯರನ್ನು ಸಂಪರ್ಕಿಸಿ ಅವರ ಪತಿಯೊಂದಿಗೆ ಮಾತನಾಡಿ ಮನವೊಲಿಸುವಂತೆ ಕೇಳಿಕೊಂಡಿದ್ದಾರೆ.

ಶನಿವಾರ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ ಯಾವುದೇ ಶಾಸಕನಿಗೂ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಬಳಸಲು ಬಿಡುವುದಿಲ್ಲ. ಬಂಡಾಯ ಶಾಸಕರು ಅವರ ತಂದೆಯ ಹೆಸರಿನಲ್ಲೇ ಚುನಾವಣೆ ಎದುರಿಸಲಿ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಾಳಾಸಾಹೇಬ್ ಠಾಕ್ರೆ ಹೆಸರು ಬಳಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಶಿವಸೇನಾ ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದೆ ಎಂದು ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ದಯವಿಟ್ಟು ಸಹಾಯ ಮಾಡೋದನ್ನ ನಿಲ್ಲಿಸಬೇಡಿ- ಅಮೆರಿಕಾಗೆ ತಾಲಿಬಾನ್ ಬೇಡಿಕೆ

ಮಹಾರಾಷ್ಟ್ರದಲ್ಲಿ ತಲೆದೂರಿರುವ ರಾಜಕೀಯ ಬಿಕ್ಕಿಟ್ಟು ಶಿವಸೇನಾ ನಾಯಕ ಏಕನಾಥ್ ಶಿಂಧೆಯಿಂದ ಆರಂಭವಾಗಿದ್ದು, ಎಂಎಲ್‍ಸಿ ಚುನಾವಣಾ ಫಲಿತಾಂಶದ ಹವಾರು ಶಾಸಕರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ. ಸದ್ಯ ಗುವಾಹಟಿಯ ಹೊಟೇಲ್‍ನಲ್ಲಿ ಬೀಡು ಬಿಟ್ಟಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯಲ್ಲ, ಆದರೆ ಹರಡುವ ಭೀತಿಯಿದೆ: WHO

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೇಕಿರುವ ಸದಸ್ಯರ ಸಂಖ್ಯೆ 143. ಸದ್ಯ ಮಹಾರಾಷ್ಟ್ರ, ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಎನ್‍ಡಿಎ ಮೈತ್ರಿಕೂಟ 113 ಸಂಖ್ಯಾಬಲ ಹೊಂದಿದೆ. ಇದೀಗ ಏಕನಾಥ ಶಿಂಧ ಬಣದಲ್ಲಿ ಪಕ್ಷೇತರ ಶಾಸಕರು ಸೇರಿದಂತೆ 48 ಶಾಸಕರು ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಎನ್‍ಡಿಎ ಮತ್ತು ಏಕನಾಥ ಶಿಂಧ ಬಣದ ಶಾಸಕರ ಸಂಖ್ಯೆ 161ಕ್ಕೆ ಹೆಚ್ಚಾಗಿದೆ. ಇದೇ ಹೊತ್ತಿಗೆ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸಂಖ್ಯಾಬಲವು 124ಕ್ಕೆ ಕುಸಿತ ಕಂಡಿದೆ. ಶಿಂಧೆ ನೇತೃತ್ವದ ಶಾಸಕರು ರಾಜೀನಾಮೆ ನೀಡಿದರೆ, ಮಹಾ ವಿಕಾಸ್ ಅಘಾಡಿ ಸಂಖ್ಯಾ ಬಲವು ಬಹುಮತಕ್ಕಿಂತ ಕೆಳಗಿಳಿಯುತ್ತದೆ, ಇದು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ.

Live Tv

Share This Article
Leave a Comment

Leave a Reply

Your email address will not be published. Required fields are marked *