ಮಹಿಳಾ ಟೆಕ್ಕಿಯನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋದ ಊಬರ್ ಚಾಲಕ!

Public TV
1 Min Read

ಬೆಂಗಳೂರು: ಮಹಿಳಾ ಟೆಕ್ಕಿಯ ಜೊತೆ ಊಬರ್ ಚಾಲಕ ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಎಚ್‍ಎಸ್‍ಆರ್ ಲೇಔಟ್ ನಿಂದ ಬೆಳ್ಳಂದೂರಿನ ಕಂಪನಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಂಪನಿಯಿಂದ ಹೋಗುವ ವೇಳೆ ಚಾಲಕ ಮಾರ್ಗ ಬದಲಾವಣೆ ಮಾಡಿದ್ದಾನೆ. ಮಾರ್ಗ ಬದಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಟೆಕ್ಕಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ.

ಈ ಕ್ಷಣವೇ ಟ್ರಿಪ್ ರದ್ದು ಪಡಿಸುತ್ತೇನೆ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಚಾಲಕ ತನ್ನ ದುಂಡಾವರ್ತನೆ ತೋರಿದ್ದಾನೆ. ಅಲ್ಲದೇ ಚಾಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿ ಟೆಕ್ಕಿಯನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋಗಿದ್ದಾನೆ.

ಮಹಿಳಾ ಟೆಕ್ಕಿ ಊಬರ್ ಕ್ಯಾಬ್ ಕೆಎ 42, ಎ 4692 ಇಟಿಯೋಸ್ ಕಾರಿನಲ್ಲಿ ಕಂಪನಿಗೆ ತೆರಳುತ್ತಿದ್ದರು. ಸದ್ಯ ಟೆಕ್ಕಿ ಟ್ವಿಟರ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಹಿಂದೆ ಜೀವನ್‍ಭೀಮಾನಗರ ಹಾಗೂ ಚಿಕ್ಕಜಾಲದಲ್ಲಿಯೂ ಇಂತದೇ ಎರಡು ಪ್ರಕರಣಗಳು ಬೆಳಕಿಗೆ ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *