ಸಂವಿಧಾನ ಬದ್ಧವಾಗಿದ್ದರೆ ಯಾರು ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು: ಯು.ಟಿ.ಖಾದರ್

Public TV
1 Min Read

– SIT ವರದಿ ಬರೋವರೆಗೆ ಧರ್ಮಸ್ಥಳ ಕೇಸ್ ಬಗ್ಗೆ ಯಾರು ಮಾತಾಡಬಾರದು; ಸ್ಪೀಕರ್‌ ವಾರ್ನಿಂಗ್‌

ಬೆಂಗಳೂರು: ಸಂವಿಧಾನ ಪ್ರಕಾರವಾಗಿ ದಸರಾ ಉದ್ಘಾಟನೆ ಬಗ್ಗೆ ಸರ್ಕಾರ ನಿರ್ಧಾರ ಸ್ವಾಗತ ಮಾಡಿದ್ರೆ ನಾವು ಅದನ್ನ ಒಪ್ಪಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ (U T Khader) ತಿಳಿಸಿದ್ದಾರೆ.

ಬಾನು ಮುಷ್ತಾಕ್ (Banu Mushtaq) ದಸರಾ (Dasara) ಉದ್ಘಾಟನೆಗೆ ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದಸರಾ ಉದ್ಘಾಟನೆ ವಿಚಾರದಲ್ಲಿ ಆಡಳಿತ ಹಾಗೂ ವಿಪಕ್ಷಗಳು ಮಾತಾಡಲಿ. ಸಂವಿಧಾನ ಬದ್ಧವಾಗಿ ಇದ್ಯಾ, ಇಲ್ವಾ ಅಂತ ಮಾತ್ರ ನಾವು ನೋಡ್ತೀವಿ ಎಂದಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

ಸಂವಿಧಾನದ ಪ್ರಕಾರ ಇದ್ದರೆ ಎಲ್ಲವನ್ನು ನಾವು ಒಪ್ಪಬೇಕು. ಸಂವಿಧಾನ ಪ್ರಕಾರ ಎಲ್ಲವೂ ಇದ್ದರೆ ಯಾವುದು ತಪ್ಪು ಅಲ್ಲ. ಸಂವಿಧಾಬ ಬದ್ಧವಾಗಿದ್ದರೆ ಯಾರೂ ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: `ಕೆಲಸ ಇದೆ ಮತ್ತೆ ಸಿಗ್ತೀನಿ’ ಅಂತ ಇನ್‌ಸ್ಟಾದಿಂದ ದಿಢೀರ್ ದೂರಾದ ರಾಜ್ ಬಿ ಶೆಟ್ಟಿ

ಧರ್ಮಸ್ಥಳ ಕೇಸ್‌ ಬಗ್ಗೆ ಯಾರೂ ಮಾತನಾಡಬಾರದು: ಸ್ಪೀಕರ್‌ ವಾರ್ನಿಂಗ್‌
ಇದೇ ವೇಲೆ ಧರ್ಮಸ್ಥಳ ಕೇಸ್ ವಿಚಾರದ ಬಗ್ಗೆ ಮಾತನಾಡಿ, ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) SIT ತನಿಖಾ ವರದಿ ಬರೋವರೆಗೂ ಯಾರು ಕೂಡಾ ನ್ಯಾಯಾಧೀಶರು ಆಗಬಾರದು. ಸರ್ಕಾರ SIT ತನಿಖೆ ರಚನೆ ಮಾಡಿದೆ. ತನಿಖೆ ಆಗ್ತಿದೆ.SIT ತನಿಖೆ ಆಗೋವರೆಗೂ ನಾವು ನ್ಯಾಯಾಧೀಶರು ಆಗೋದು ಬೇಡ.ಕ್ಷೇತ್ರದ ಪಾವಿತ್ರ್ಯತೆ ನಮಗೆ ಮುಖ್ಯ ಎಂದರು.

ಒಂದು ಶಿಕ್ಷಣ ಸಂಸ್ಥೆಯ ಗೌರವ ಉಳಿಯೋದು ಮುಖ್ಯ. ಒಂದು ಸಂಸ್ಥೆಯನ್ನ ಕಟ್ಟೋದು ತುಂಬಾ ಕಷ್ಟ. ಕಪ್ಪು ಚುಕ್ಕೆ ಮಾಡೋದು ಸುಲಭ.SIT ತನಿಖೆ ವರದಿ ಬರಲಿ. ಅಲ್ಲಿಯವರೆಗೆ ಎಲ್ಲರು ಕಾಯಬೇಕು.ತನಿಖೆ ವರದಿ ಬರಲಿ ಅಮೇಲೆ ಎಲ್ಲರು‌ ಮಾತಾಡಿ ಅಂತ ತಿಳಿಸಿದರು.

Share This Article