ಯುಪಿಎಸ್‌ನಲ್ಲಿ ʻUʼ ಅಂದ್ರೆ ಮೋದಿ ಸರ್ಕಾರ ಯುಟರ್ನ್‌ – ಏಕೀಕೃತ ಪಿಂಚಣಿ ಯೋಜನೆ ಕುರಿತು ಖರ್ಗೆ ಟೀಕೆ

Public TV
3 Min Read

– 140 ಕೋಟಿ ಭಾರತೀಯರನ್ನು ನಾವು ರಕ್ಷಿಸುತ್ತೇವೆ ಎಂದ ಎಐಸಿಸಿ ನಾಯಕ
– ಕರ್ನಾಟಕ ಕಾಂಗ್ರೆಸ್‌ನಂತೆ ಆರ್ಥಿಕ ಅವ್ಯವಸ್ಥೆ ಮಾಡಲ್ಲ: ಬಿಜೆಪಿ ವಕ್ತಾರ ಕಿಡಿ

ನವದೆಹಲಿ: ಎನ್‌ಡಿಎ ನೇತೃತ್ವದ ಕೇಂದ್ರ ಸಂಪುಟ ಏಕೀಕೃತ ಪಿಂಚಣಿ ಯೋಜನೆಗೆ (UPS) ಅನುಮೋದನೆ ನೀಡಿದ ಮರುದಿನವೇ ಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು, ಮೋದಿ ಸರ್ಕಾರವನ್ನು ʻಯು-ಟರ್ನ್‌ ಸರ್ಕಾರʼ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ವರದಿಯೊಂದನ್ನು ಉಲ್ಲೇಖಿಸಿ ಎಕ್ಸ್‌ ಖಾತೆಯಲ್ಲಿ ಟೀಕಿಸಿರುವ ಖರ್ಗೆ ಅವರು, ʻಯುಪಿಎಸ್‌ʼನಲ್ಲಿ ʻಯುʼ ಅಂದ್ರೆ ಮೋದಿ ಸರ್ಕಾರದ ಯು-ಟರ್ನ್‌ಗಳು. ಮೋದಿ ಸರ್ಕಾರ (Modi government) ಯು-ಟರ್ನ್‌ ಸರ್ಕಾರ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಜೂನ್ 4ರ ನಂತರ, ಪ್ರಧಾನ ಮಂತ್ರಿಯ ಅಧಿಕಾರದ ದುರಹಂಕಾರದ ಮುಂದೆ ಜನರ ಶಕ್ತಿ ಮೇಲುಗೈ ಸಾಧಿಸಿದೆ. ಜಂಟಿ ಸಂಸದೀಯ ಸಮಿತಿಗೆ ವಕ್ಫ್ ಮಸೂದೆಯನ್ನು ಕಳುಹಿಸುವುದು, ಪ್ರಸಾರ ಮಸೂದೆಯ ಹಿಂಪಡೆಯುವಿಕೆ ದೀರ್ಘಾವಧಿಯ ಬಂಡವಾಳ ಗಳಿಕೆ/ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ರೋಲ್‌ಬ್ಯಾಕ್, ಜಂಟಿ ಸಂಸದೀಯ ಸಮಿತಿಗೆ ವಕ್ಫ್ ಮಸೂದೆಯನ್ನು ಕಳುಹಿಸುವುದು, ಪ್ರಸಾರ ಮಸೂದೆಯ ರೋಲ್‌ಬ್ಯಾಕ್, ಲ್ಯಾಟರಲ್ ಎಂಟ್ರಿಯ ರೋಲ್‌ಬ್ಯಾಕ್ ಮುಂತಾದವು ಮೋದಿ ಸರ್ಕಾರದ ಯು-ಟರ್ನ್‌ಗಳುʼ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾವು ಹೊಣೆಗಾರಿಕೆಯನ್ನು ಖಾತ್ರಿಪಡಿಸಿಕೊಳ್ಳುತ್ತೇವೆ, ಜೊತೆಗೆ ನಿರಂಕುಶ ಸರ್ಕಾರದಿಂದ 140 ಕೋಟಿ ಭಾರತೀಯರನ್ನು ರಕ್ಷಿಸುತ್ತೇವೆ ಎಂದು ಖರ್ಗೆ ಅಭಯ ನೀಡಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್‌ನಲ್ಲೇ ಬಾಲಕಿ ಮೇಲೆ ಗ್ಯಾಂಗ್‌ರೇಪ್ – ಐವರ ವಿರುದ್ಧ ಪೋಕ್ಸೋ ಕೇಸ್!

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ತುಹಿನ್ ಸಿನ್ಹಾ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳು ಸೇರಿದಂತೆ ಕಾಂಗ್ರೆಸ್ ಎಲ್ಲೆಲ್ಲಿ ಆಡಳಿತ ನಡೆಸುತ್ತದೆಯೋ ಅಲ್ಲಿ ಅವರು ಯಾವಾಗಲೂ ಆರ್ಥಿಕ ಅವ್ಯವಸ್ಥೆ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗೋಲ್ಡನ್ ಟೆಂಪಲ್‍ನಲ್ಲಿ ಕೇಜ್ರಿವಾಲ್ ಬಿಡುಗಡೆಗೆ ಮನೀಶ್ ಸಿಸೋಡಿಯಾ ಪ್ರಾರ್ಥನೆ

ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿರುವವರು ಆತುರದ ರೀತಿಯಲ್ಲಿ ಯೋಚಿಸುತ್ತಾರೆ. ಅದರಿಂದ ಆರ್ಥಿಕ ಅವ್ಯವಸ್ಥೆ ಉಂಟಾಗುತ್ತದೆ. ಆದ್ರೆ ನಮ್ಮ ಸರ್ಕಾರ ಕಾಂಗ್ರೆಸ್‌ಗಿಂತ ಭಿನ್ನವಾಗಿ ಯೋಚಿಸುತ್ತದೆ. ಮೊದಲು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೇಂದ್ರ ಸರ್ಕಾರ ಕಾಳಜಿ ವಹಿಸುತ್ತದೆ. ಹೊಸ ಯುಪಿಎಸ್ 1 ವರ್ಷದಿಂದ ಕೆಲಸ ಮಾಡುತ್ತಿದೆ. ಹಣಕಾಸು ಕಾರ್ಯದರ್ಶಿ ಟಿ.ವಿ ಸೋಮನಾಥನ್ ಅಂತಿಮಗೊಳಿಸುವ ಮೊಲದಲು 100ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯುಪಿಎಸ್, ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಇದನ್ನೂ ಓದಿ: ಬಾಂಗ್ಲಾದಿಂದ ಭಾರತಕ್ಕೆ ಹಿಂದೂಗಳೇ ಬರ್ತಿಲ್ಲ, ಆದ್ರೆ 35 ಮುಸ್ಲಿಂ ನುಸುಳುಕೋರರನ್ನು ಬಂಧಿಸಿದ್ದೇವೆ: ಅಸ್ಸಾಂ ಸಿಎಂ

ಏಕೀಕೃತ ಪಿಂಚಣಿ ಯೋಜನೆಯ ಉಪಯೋಗ ಏನು?
ಇದು ಸರ್ಕಾರಿ ನೌಕರರಿಗೆ ಇತ್ತೀಚಿನ ಪಿಂಚಣಿ ಯೋಜನೆಯಾಗಿದೆ. ಸರ್ಕಾರಿ ನೌಕರರಿಗೆ ನಿಶ್ಚಿತ ಪಿಂಚಣಿ ಮೊತ್ತದ ಭರವಸೆ ನೀಡುವ ಯೋಜನೆ ಇದಾಗಿದೆ.

1. ಖಚಿತವಾದ ಪಿಂಚಣಿ: ಕನಿಷ್ಠ 25 ವರ್ಷಗಳ ಸೇವೆ ಪೂರ್ಣಗೊಳಿಸುವ ಸರ್ಕಾರಿ ನೌಕರರಿಗೆ ನಿವೃತ್ತಿಯ ಮೊದಲು ಕಳೆದ 12 ತಿಂಗಳ ಸರಾಸರಿ ಮೂಲ ವೇತನದ 50% ನಷ್ಟು ಈ ಯೋಜನೆಯು ಖಾತರಿಪಡಿಸುತ್ತದೆ. ಕನಿಷ್ಠ 10 ವರ್ಷಗಳ ಸೇವೆಯವರೆಗಿನ ಕಡಿಮೆ ಸೇವಾ ಅವಧಿಗೆ ಇದು ಅನುಪಾತದಲ್ಲಿರುತ್ತದೆ.

2. ಖಚಿತವಾದ (ಸ್ಥಿರ) ಕುಟುಂಬ ಪಿಂಚಣಿ: ಉದ್ಯೋಗಿಯ ಮರಣದ ಸಂದರ್ಭದಲ್ಲಿ ನೀಡಲಾಗುವ ಪಿಂಚಣಿ ವ್ಯವಸ್ಥೆಯಾಗಿದೆ. ಇದು ಉದ್ಯೋಗಿಯ ಮೂಲ ವೇತನದ 60 ಪ್ರತಿಶತದಷ್ಟು ಪಡೆಯಬಹುದಾಗಿದೆ.

3. ಖಚಿತವಾದ ಕನಿಷ್ಠ ಪಿಂಚಣಿ: ಕನಿಷ್ಠ 10 ವರ್ಷಗಳ ಸೇವೆ ಸಲ್ಲಿದ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ತಿಂಗಳಿಗೆ 10,000 ರೂ.ನಂತೆ ಖಚಿತವಾದ ಕನಿಷ್ಠ ಪಿಂಚಣಿ ಒದಗಿಸುತ್ತದೆ
ಭರವಸೆ ನೀಡುತ್ತದೆ.

ಪ್ರಸ್ತುತ ಪಿಂಚಣಿ ಯೋಜನೆಯ ಪ್ರಕಾರ, ನೌಕರರು ಶೇ.10 ರಷ್ಟು ಕೊಡುಗೆ ನೀಡಿದರೆ, ಕೇಂದ್ರ ಸರ್ಕಾರವು ಶೇ.14 ರಷ್ಟು ಕೊಡುಗೆ ನೀಡುತ್ತದೆ, ಇದನ್ನು ಯುಪಿಎಸ್‌ನೊಂದಿಗೆ ಶೇ.18ಕ್ಕೆ ಹೆಚ್ಚಿಸಲಾಗುತ್ತದೆ.

Share This Article