U -19 World Cup 2022: 96 ರನ್‌ಗಳ ಭರ್ಜರಿ ಜಯ, ಫೈನಲಿಗೆ ಭಾರತ

Public TV
2 Min Read

ಆಂಟಿಗುವಾ: 19 ವರ್ಷದ ಒಳಗಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 96 ರನ್‌ಗಳ ಜಯಗಳಿಸಿ ಫೈನಲ್‌ ಪ್ರವೇಶಿಸಿದೆ.

ಗೆಲ್ಲಲು 291 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 41.5 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಸತತ 4ನೇ ಬಾರಿಗೆ ಭಾರತ ಫೈನಲ್‌ ಪ್ರವೇಶಿಸಿದೆ.

ಆಸ್ಟ್ರೇಲಿಯಾ ಪರ ಲಾಚ್ಲಾನ್ ಶಾ 51 ರನ್‌(66 ಎಸೆತ, 4 ಬೌಂಡರಿ), ಕೋರೆ ಮಿಲ್ಲರ್‌ 38 ರನ್‌(46 ಎಸೆತ, 6 ಬೌಂಡರಿ) ಕ್ಯಾಂಪ್ಬೆಲ್ 30 ರನ್‌( 50 ಎಸೆತ, 1 ಬೌಂಡರಿ) ಹೊಡೆದು ಔಟಾದರು. ವಿಕ್ಕಿ ಓಸ್ಟ್ವಾಲ್‌ 3 ವಿಕೆಟ್‌ ಪಡೆದರೆ, ರವಿಕುಮಾರ್‌ ಮತ್ತು ನಿಶಾಂತ್‌ ಸಿಂಧು ತಲಾ ಎರಡು ವಿಕೆಟ್‌ ಪಡೆದರು. ಶನಿವಾರ ಭಾರತ ಮತ್ತು ಇಂಗ್ಲೆಂಡ್‌ ಮಧ್ಯೆ ಫೈನಲ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ನಾಯಕ ಯಶ್ ಧುಲ್ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾಗೆ 291 ರನ್‍ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಭಾರತ ತಂಡದ ಆರಂಭಿಕ ಆಟಗಾರರಾದ ಆಂಕ್ರಿಶ್ ರಘುವಂಶಿ 6 ರನ್ (30 ಎಸೆತ) ಮತ್ತು ಹರ್ನೂರ್ ಸಿಂಗ್ 16 ರನ್ (28 ಎಸೆತ, 3 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಒಂದಾದ ಶೇಕ್ ರಶೀದ್ ಮತ್ತು ಯಶ್ ಧುಲ್ ಆಸ್ಟ್ರೇಲಿಯಾ ಬೌಲರ್‌ಗಳ ಬೆವರಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಪಿಎಲ್ ಹರಾಜು – 590 ಆಟಗಾರರಿಗೆ ಫೈನಲ್‌ ಪಟ್ಟಿಯಲ್ಲಿ ಸ್ಥಾನ

ಇಬ್ಬರು ಆಟಗಾರರು ಕೂಡ ಆಸ್ಟ್ರೇಲಿಯಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ರಶೀದ್ 94 ರನ್ (108 ಎಸೆತ, 8 ಬೌಂಡರಿ, 1 ಸಿಕ್ಸ್) ಬಾರಿಸಿ ಶತಕ ವಂಚಿತರಾದರೆ, ಯಶ್ ಧುಲ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು.

ಯಶ್ ಧುಲ್ 110 ರನ್ (110 ಎಸೆತ, 10 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ನಂತರ ರಾಜವರ್ಧನ್ ಹಂಗರಗೇಕರ್ 13 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರ ಕಡೆಯಲ್ಲಿ ಭರ್ಜರಿಯಾಗಿ ಬ್ಯಾಟ್‍ಬೀಸಿದ ದಿನೇಶ್ ಬಣ ಅಜೇಯ 20 ರನ್ (4 ಎಸೆತ, 2 ಬೌಂಡರಿ, 2 ಸಿಕ್ಸ್) ಮತ್ತು ನಿಶಾಂತ್ ಸಿಂಧು 12 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿದ್ದರಿಂದ ಭಾರತ 5 ವಿಕೆಟ್‌ ನಷ್ಟಕ್ಕೆ 290 ರನ್‌ ಗಳಿಸಿತು. ಆಸ್ಟ್ರೇಲಿಯಾ ಪರ ಜಾಕ್ ನಿಬ್ಬೆಟ್ ಮತ್ತು ವಿಲಿಯಂ ಸಾಲ್ಜ್‍ಮನ್ ತಲಾ 2 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *