ಯುವತಿಯೊಬ್ಬಳ ಹಿಂದೆ ಓಡಿಹೋದ ಇಬ್ಬರು ಯುವಕರು – ಯಾರನ್ನ ಮದ್ವೆಯಾಗಿದ್ದಾಳೆ ಅನ್ನೋದೆ ಸಸ್ಪೆನ್ಸ್!

Public TV
1 Min Read

ಬಳ್ಳಾರಿ: ಹುಡುಗ- ಹುಡುಗಿ ಲವ್ ಮಾಡೋದು ಮಾಮೂಲು. ಆದರೆ ಒಂದೇ ಯುವತಿಯನ್ನು ಇಬ್ಬರು ಲವ್ ಮಾಡಿ ಓಡಿಹೋಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹರಿಹರ ತಾಲೂಕಿನ ಸಾಲುಕಟ್ಟಿ ಗ್ರಾಮದ ಯುವತಿ ಜೂನ್ 28ರಂದು ಮನೆಬಿಟ್ಟು ಓಡಿಹೋಗಿದ್ದಾಳೆ. ಆಕೆಯ ಜೊತೆ ಇಬ್ಬರು ಯುವಕರು ಮನೆ ಬಿಟ್ಟು ಓಡಿ ಹೋಗಿದ್ದಾರೆ. ಆದರೆ ಈಗ ಆಕೆ ಇಬ್ಬರು ಯುವಕರಲ್ಲಿ ಯಾರನ್ನೂ ಲವ್ ಮಾಡಿ ಮದುವೆಯಾಗಿದ್ದಾಳೆ ಅನ್ನೋದೇ ಮನೆಯವರ ಪ್ರಶ್ನೆಯಾಗಿದೆ.

ಗುತ್ತೂರ ಗ್ರಾಮದ ಬಸವರಾಜ ಹಾಗೂ ಹಡಗಲಿ ತಾಲೂಕಿನ ಕೊಂಬಳಿ ಗ್ರಾಮದ ಮಧುಕುಮಾರ ಓಡಿ ಹೋಗಿದ್ದಾರೆ. ಯುವತಿ ಮನೆ ಬಿಟ್ಟು ಓಡಿ ಹೋದ ನಂತರ ತಾಳಿ ಕಟ್ಟಿಸಿಕೊಂಡಿರುವ ಫೋಟೋವೊಂದನ್ನ ಮನೆಗೆ ಕಳುಹಿಸಿದ್ದಾಳೆ. ಅದರಲ್ಲಿ ಆಕೆ ಒಬ್ಬಳೇ ಇರುವ ಫೋಟೋ ಕಳುಹಿಸಿದ್ದಾಳೆ. ಆದ್ದರಿಂದ ಯಾರನ್ನ ಮದುವೆಯಾಗಿದ್ದಾಳೆ ಅನ್ನೋದೆ ಇಬ್ಬರು ಯುವಕರ ಹೆತ್ತವರಿಗೆ ಯಕ್ಷಪ್ರಶ್ನೆಯಾಗಿದೆ.

ಅಲ್ಲದೇ ಮೂವರು ನಾಪತ್ತೆಯಾದ ನಂತರ ಪತ್ತೆಗಾಗಿ ಬಲೆ ಬೀಸಿರುವ ಪೊಲೀಸರಿಗೂ ಸಹ ಇದೊಂದು ಕಗ್ಗಂಟ್ಟಿನ ಪ್ರಕರಣವಾಗಿ ಬಿಟ್ಟಿದೆ. ಹೀಗಾಗಿ ಯುವತಿಯನ್ನು ಇಬ್ಬರಲ್ಲಿ ಯಾರೇ ಮದುವೆಯಾಗಿದ್ದರೂ ಮನೆಗೆ ಬನ್ನಿ ಅಂತಾ ಮನೆಯವರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಯುವತಿ ಇಬ್ಬರು ಯುವಕರಲ್ಲಿ ಯಾರನ್ನು ಮದುವೆಯಾಗಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಹೀಗಾಗಿ ಯುವತಿ ಮರಳಿ ಮನೆಗೆ ಬಂದಾಗಲೇ ಇಬ್ಬರಲ್ಲಿ ಯಾರನ್ನೂ ಮದುವೆಯಾಗಿದ್ದು ಅನ್ನೋದು ತಿಳಿಯಲಿದೆ.

Share This Article
Leave a Comment

Leave a Reply

Your email address will not be published. Required fields are marked *