ರೈಲುಗಳ ನಡುವೆ ಭೀಕರ ಅಪಘಾತ- 32 ಮಂದಿ ದುರ್ಮರಣ

Public TV
1 Min Read

ಅಥೆನ್ಸ್: ಪ್ಯಾಸೆಂಜರ್ ಹಾಗೂ ಗೂಡ್ಸ್ ರೈಲಿನ (Train) ನಡುವೆ ಅಪಘಾತ ಸಂಭವಿಸಿ 32 ಜನರು ಮೃತಪಟ್ಟು, 85 ಮಂದಿ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ಗ್ರೀಸ್‍ನ (Greece) ಟೆಂಪೆಯಲ್ಲಿ ನಡೆದಿದೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಥೆಸ್ಸಾಲಿ ಪ್ರದೇಶದ ಗವರ್ನರ್ (Governor) ಕಾನ್ಸಾಂಟಿನೋಸ್ ಅಗೋರಾಸ್ಟೋಸ್, ಅಪಘಾತ (Accident) ಬಹಳ ಪ್ರಬಲವಾಗಿ ನಡೆದಿದೆ. ರೈಲಿನ ಮುಂಭಾಗದ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಎದುರಿನ ಎರಡು ಬೋಗಿಗಳು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಲಾರಿ ಮೇಲೆ ಮುರಿದು ಬಿದ್ದ ಭಾರೀ ಗಾತ್ರದ ಕಬ್ಬಿಣದ ಸಲಾಕೆ- ತಪ್ಪಿದ ಅನಾಹುತ

ರೈಲಿನಲ್ಲಿ ಸುಮಾರು 350 ಪ್ರಯಾಣಿಕರಿದ್ದರು. ಅದರಲ್ಲಿ 250 ಪ್ರಯಾಣಿಕರನ್ನು (Passengers) ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಗವರ್ನರ್ ತಿಳಿಸಿದ್ದಾರೆ.

ಎರಡು ರೈಲುಗಳ ನಡುವಿನ ಘರ್ಷಣೆಯ ತೀವ್ರತೆಯಿಂದ ರಕ್ಷಣಾ ಕಾರ್ಯದಲ್ಲಿ ವಿಳಂಬವಾಗುತ್ತಿದೆ ಎಂದು ಅಗ್ನಿಶಾಮಕ ದಳದ (Fire service) ವಕ್ತಾರ ವಾಸಿಲಿಸ್ ವರ್ತಕೊಯಾನಿಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರಕ್ಷಣಾ ಕಾರ್ಯಕ್ಕೆ ಸೇನೆಯ ನೆರವುಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಣೆಯಾಗಿದ್ದ 6ರ ಬಾಲಕಿ ಶವವಾಗಿ ಪತ್ತೆ – ಅತ್ಯಾಚಾರದ ಶಂಕೆ

Share This Article
Leave a Comment

Leave a Reply

Your email address will not be published. Required fields are marked *