ಹಾಸನ: ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗುವ ಭಾರೀ ಅಪಘಾತವೊಂದು ತಪ್ಪಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೈಸೂರಿನಿಂದ ಹೊರಟ ತಾಳಗುಪ್ಪ ಪ್ಯಾಸೆಂಜರ್ ಮತ್ತು ಅರಸೀಕೆರೆಯಿಂದ ಹೊರಟ ಮೈಸೂರು ಪ್ಯಾಸೆಂಜರ್ ರೈಲು, ನಿಲ್ದಾಣಕ್ಕೆ ಏಕಕಾಲದಲ್ಲಿ ಬಂದಿವೆ.
ತಾಳಗುಪ್ಪ ರೈಲು ಮೊದಲೇ ಬಂದು ಮೊದಲನೇ ಪ್ಲಾಟ್‍ಫಾರ್ಮ್ ನಲ್ಲಿ ನಿಂತಿತ್ತು. ನಂತರ ಬಂದ ರೈಲು ಎರಡನೇ ಪ್ಲಾಟ್‍ಫಾರ್ಮ್ ಗೆ ಹೋಗಬೇಕಿತ್ತು. ಆದ್ರೆ ಅದೂ ಕೂಡ ಮೊದಲನೇ ಪ್ಲಾಟ್‍ಫಾರ್ಮ್ ಗೆ ಬಂದಿದೆ.
ಆದ್ರೆ ಹತ್ತಿರಕ್ಕೆ ಬಂದ ರೈಲು ಚಾಲಕ ಸಮಯ ಪ್ರಜ್ಞೆ ಮೆರೆದಿದ್ದು ರೈಲನ್ನು ನಿಧಾನಗೊಳಿಸಿದ್ದಾರೆ. ನಂತರ ಮತ್ತೆ ಹಿಂದಕ್ಕೆ ಹೋಗಿ ಮತ್ತೊಂದು ಪ್ಲಾಟ್‍ಫಾರ್ಮ್ ನಲ್ಲಿ ನಿಲ್ಲಿಸಿದ್ದಾರೆ. ಇದರಿಂದಾಗಿ ಎರಡೂ ರೈಲುಗಳು ಮುಖಾಮುಖಿಯಾಗಿ ನಡೆಯಬಹುದಾಗಿದ್ದ ಭಾರೀ ದುರಂತ ತಪ್ಪಿದಂತಾಗಿದೆ.