ಎನ್‌ಆರ್‌ಪುರ | ಇಬ್ಬರಿಗೆ ಕೆಎಫ್‍ಡಿ ದೃಢ – ಜನರಲ್ಲಿ ಹೆಚ್ಚಿದ ಆತಂಕ

1 Min Read

ಚಿಕ್ಕಮಗಳೂರು: ಎನ್‌ಆರ್‌ಪುರ (N.R. Pura) ತಾಲೂಕಿನ ಕಟ್ಟಿನಮನೆ ಗ್ರಾಮದ ಯುವಕನೊಬ್ಬನಿಗೆ ಕೆಎಫ್‍ಡಿ (KFD) ಸೋಂಕು ದೃಢವಾಗಿದೆ. ಈ ಮೂಲಕ ಗ್ರಾಮದ ಇಬ್ಬರಲ್ಲಿ ಸೋಂಕು ಪತ್ತೆಯಾದಂತಾಗಿದೆ.

ಗ್ರಾಮದ 30 ವರ್ಷದ ಯುವಕನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಆತನನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಬ್ಬನಿಗೆ ಬೇರೆ ಅನಾರೋಗ್ಯದ ಕಾರಣ ಮಣಿಪಾಲ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಹೊಸನಗರ | ಒಂದೇ ಗ್ರಾಮದ 6 ಮಂದಿಗೆ ಮಂಗನ ಕಾಯಿಲೆ

ಕಟ್ಟಿಮನೆ ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರಿಗೆ ಗ್ರಾಮದ ಶುಚಿತ್ವದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ (Hosanagar) ತಾಲೂಕಿನ ಬಿಳ್ಕೋಡಿ ಗ್ರಾಮದ 6 ಮಂದಿಗೆ ಮಂಗನ ಕಾಯಿಲೆ (KFD) ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಚಳಿ ಎಫೆಕ್ಟ್‌ಗೆ ಮೇವು ತಿನ್ನದ ಹಸುಗಳು – ಹಾಲಿನ ಉತ್ಪಾದನೆ ಇಳಿಕೆ

Share This Article