ಜಾತಿಗಣತಿಗೆ ಗೈರು – ಇಬ್ಬರು ಶಿಕ್ಷಕರು ಅಮಾನತು

Public TV
1 Min Read

ಬಳ್ಳಾರಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಗೈರಾದ ಬಳ್ಳಾರಿ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರನ್ನ ಸೇವೆಯಿಂದ ಅಮಾನತು ಮಾಡಲಾಗಿದೆ.

ಗಣತಿದಾರ ರವಿಚಂದ್ರ ಬಿ.ಸಿ ಹಾಗೂ ಮೇಲ್ವಿಚಾರಕ ರಾಘವೇಂದ್ರ ರಾವ್ ಅಮಾನತಾದ ಶಿಕ್ಷಕರು. ಕಂಪ್ಲಿಯ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆ ವಿಭಾಗದ ಶಿಕ್ಷಕ ರವಿಚಂದ್ರ ಹಾಗೂ ಸಂಡೂರಿನ ಆದರ್ಶ ವಿದ್ಯಾಲಯದ ಶಿಕ್ಷಕ ರಾಘವೇಂದ್ರ ಇಬ್ಬರನ್ನೂ ಸಮೀಕ್ಷೆಗೆ ನಿಯೋಜಿಸಲಾಗಿತ್ತು. ಸಮೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿದ್ದರೂ ಇಬ್ಬರೂ ಶಿಕ್ಷಕರು ನಿರ್ಲಕ್ಷ್ಯ ತೋರಿದ್ದರು. ಇದನ್ನೂ ಓದಿ: ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ, GBA ಚುನಾವಣೆಗೆ ತಯಾರಿ ಎಲ್ಲಿ?: ಸರ್ಕಾರಕ್ಕೆ ವಿಜಯೇಂದ್ರ ಪ್ರಶ್ನೆ

ಸಮೀಕ್ಷೆಗೆ ತೆರಳದೆ ಗೈರು ಹಾಜರಾಗಿದ್ದ ಹಿನ್ನೆಲೆ ಬೇಜವಾಬ್ದಾರಿ ತೋರಿ, ಜಿಲ್ಲೆಯಲ್ಲಿ ಸಮೀಕ್ಷೆ ಕುಂಠಿತಕ್ಕೆ ಕಾರಣವಾಗಿದ್ದೀರಿ ಎಂದು ಕಾರಣ ನೀಡಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಇಬ್ಬರೂ ಶಿಕ್ಷಕರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಸಮೀಕ್ಷೆ ಅವಧಿಯನ್ನು ಅ.18ರ ವರೆಗೆ ವಿಸ್ತರಿಸಿದೆ. ಅಲ್ಲಿವರೆಗೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ರಜೆ ನೀಡಲಾಗಿದೆ. ಇದನ್ನೂ ಓದಿ: ಜಾತಿಗಣತಿ ಸಮೀಕ್ಷೆಗಾಗಿ ದಸರಾ ರಜೆ ವಿಸ್ತರಣೆ – ಎಲ್ಲಾ ಸರ್ಕಾರಿ ಶಾಲೆಗಳಿಗೆ ಅ.18 ರವರೆಗೆ ರಜೆ

Share This Article