ವಾಹನ ಚಾಲಕರ ಬಳಿ ಲಂಚ – ಇಬ್ಬರು RTO ಅಧಿಕಾರಿಗಳು ಲೋಕಾ ಬಲೆಗೆ

1 Min Read

ಬೆಂಗಳೂರು: ವಾಹನಗಳ ಚಾಲಕರ ಬಳಿ ಲಂಚ (Bribe) ಪಡೆಯುತ್ತಿದ್ದ ಬೆಂಗಳೂರು ಹೊರವಲಯ ನೆಲಮಂಗಲದ (Nelamangala) ಇಬ್ಬರು ಆರ್‌ಟಿಓ (RTO) ಅಧಿಕಾರಿಗಳು ಲೋಕಾಯುಕ್ತ (Lokayukta) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಡಾ.ಕೋನ ವಂಶಿ ಕೃಷ್ಣ ನೇತೃತ್ವದಲ್ಲಿ ಟ್ರ‍್ಯಾಪ್ ಮಾಡಲಾಗಿದೆ. ನೆಲಮಂಗಲ ಆರ್‌ಟಿಓ ಇನ್ಸ್ಪೆಕ್ಟರ್ ಅಧಿಕಾರಿಗಳಾದ ದಿನೇಶ್ ಹಾಗೂ ಕಿರಣ್ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ನಮ್ಮ ಬೆಕ್ಕು ಮರಿ ಹಾಕಲು ನಿಮ್ಮ ಗಂಡು ಬೆಕ್ಕೇ ಕಾರಣ – ಮಾರಾಮಾರಿ ನಡೆಸುತ್ತಿದ್ದವರಿಗೆ ಪೊಲೀಸರು ಮಾಡಿದ್ದೇನು?

ಪ್ರತಿನಿತ್ಯ ವಾಹನಗಳ ತಪಾಸಣೆ ನಡೆಸುತ್ತಿದ್ದ ಇಬ್ಬರು ಆರ್‌ಟಿಓ ಅಧಿಕಾರಿಗಳು ವಾಹನಗಳ ಚಾಲಕರ ಬಳಿ ಲಂಚ ಪಡೆದು ಕಳುಹಿಸುತ್ತಿದ್ದಾರೆ ಎಂಬ ದೂರು ಸಂಬಂಧ ಮಾಹಿತಿ ಆಧಾರದ ಮೇರೆಗೆ ಲೋಕಾ ಅಧಿಕಾರಿಗಳು ಇಬ್ಬರನ್ನೂ ಟ್ರ‍್ಯಾಪ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!

Share This Article