ಶಿವಮೊಗ್ಗದಲ್ಲಿ 500 ರೂ. ಮುಖಬೆಲೆಯ ನಕಲಿ ನೋಟು ಚಲಾವಣೆ- ಇಬ್ಬರ ಬಂಧನ

Public TV
1 Min Read

ಶಿವಮೊಗ್ಗ: ಹೊಸ 500 ರೂಪಾಯಿಯ ನಕಲಿ ನೋಟುಗಳ ಹಾವಳಿಯಿಂದ ಜಿಲ್ಲೆ ತತ್ತರಿಸಿದೆ. ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಜಾಲವೊಂದನ್ನು ಇದೀಗ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಶಿವಮೊಗ್ಗದ ಟಿಪ್ಪು ನಗರದ ಅಮ್ಜದ್ ಪಾಷಾ ಹಾಗೂ ಮೋಹಿನ್ ಖಾನ್ ಎಂಬವರನ್ನು ಬಂಧಿಸಲಾಗಿದೆ. ಇವರ ತಂಡ ಈಗಾಗಲೇ ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ಐನೂರು ರೂಪಾಯಿ ಮುಖಬೆಲೆಯ 350ಕ್ಕೂ ಹೆಚ್ಚು ನೋಟುಗಳನ್ನು ಚಲಾವಣೆ ಮಾಡಿದೆ. ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳಾದ ಭದ್ರಾವತಿಯ ತೌಸಿಫ್ ಹಾಗೂ ಬೆಂಗಳೂರಿನ ಇಮ್ರಾನ್ ನಾಪತ್ತೆಯಾಸಗಿದ್ದಾರೆ. ಇವರು ಪಶ್ಚಿಮಬಂಗಾಳದ ವ್ಯಕ್ತಿಗೆ 70 ಸಾವಿರ ರೂ. ಅಸಲಿ ನೋಟು ನೀಡಿ 2 ಲಕ್ಷ ಖೋಟಾ ನೋಟುಗಳನ್ನು ತಂದು ಚಲಾವಣೆ ಮಾಡಿದ್ದಾರೆ ಎನ್ನಲಾಗಿದೆ.

ಇವರಿಂದ ಐನೂರು ರೂಪಾಯಿ ಮುಖಬೆಲೆಯ 26 ಸಾವಿರ ರೂಪಾಯಿ, 52 ಖೋಟಾನೋಟುಗಳು ಹಾಗೂ ಈ ಖೋಟಾನೋಟುಗಳ ಜೊತೆ ಮಿಶ್ರಣ ಮಾಡಿ ಚಲಾವಣೆ ಮಾಡಲು ಬಳಸುತ್ತಿದ್ದ 500 ಮುಖಬೆಲೆಯ 210 ಅಸಲಿ ಅಂದರೆ ಒಂದು ಲಕ್ಷದ ಐದು ಸಾವಿರ ಅಸಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗದಲ್ಲಿ ಚಲಾವಣೆಗೊಂಡಿರುವ ನಕಲಿ ನೋಟಿನ ಸೀರೀಸ್ ನಂಬರ್ LEN875002, LEN875022, LEN875042, LEN875040, IEN 87002 ಆಗಿದ್ದು, ಸಿಕ್ಕಿರುವ ನಕಲಿ ನೋಟುಗಳು ಇದೇ 5 ಕ್ರಮಾಂಕದಲ್ಲಿ ಮುದ್ರಣಗೊಂಡಿವೆ.

ಈ ಕುರಿತು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *