ಗದಗ: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಪ್ರಾಪ್ತೆ ಸಾವನ್ನಪ್ಪಿರುವ ಘಟನೆ ಗದಗ (Gadag) ಜಿಲ್ಲೆ ಗಜೇಂದ್ರಗಡ ತಾಲೂಕಿನ ರಾಜೂರ (Rajura) ಗ್ರಾಮದಲ್ಲಿ ನಡೆದಿದೆ.
17 ವರ್ಷದ ಅಪ್ರಾಪ್ತ ಬಾಲಕಿ ಮೃತಪಟ್ಟಿದ್ದು, ಯುವಕ ದೇವಪ್ಪ ಅಲಿಯಾಸ್ ಮುತ್ತು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಹೆಸ್ರಲ್ಲಿ ವಂಚನೆ ಕೇಸ್; ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದ `ಬಂಗಾರಿ’ ಗೌಡ!
ಅಪ್ರಾಪ್ತೆಯ ಮನೆಯಲ್ಲಿ ಇಬ್ಬರ ಪ್ರೀತಿಯನ್ನು ನಿರಾಕರಿಸಿದ್ದರು. ಇದ್ದರಿಂದ ಮನನೊಂದ ಪ್ರೇಮಿಗಳಿಬ್ಬರು ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡ ಇಬ್ಬರನ್ನು ಗ್ರಾಮಸ್ಥರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ನನ್ನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ: ನಿಶಾ ಯೋಗೇಶ್ವರ್
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಪ್ರಾಪ್ತೆ ಮೃತಪಟ್ಟಿದ್ದಾಳೆ. ಯುವಕ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಘಟನೆಯ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.