ನೆಲಮಂಗಲ: ಕುರಿ, ಮೇಕೆ ತುಂಬಿದ್ದ ಲಾರಿಗೆ (Lorry) ಕೆಎಸ್‌ಆರ್‌ಟಿಸಿ ಬಸ್ (KSRTC Bus) ಡಿಕ್ಕಿಯಾಗಿ ಲಾರಿ ಚಾಲಕ ಸೇರಿ ಇಬ್ಬರು ಸಾವನ್ನಪ್ಪಿರುವ ನೆಲಮಂಗಲ ಸಂಚಾರಿ ಪೊಲೀಸ್ (Nelamangala Traffic Police) ಠಾಣಾ ವ್ಯಾಪ್ತಿಯ ಗುಂಡೇನಹಳ್ಳಿ ಬಳಿ ಘಟನೆ ನಡೆದಿದೆ.
ಲಾರಿ ಚಾಲಕ ಸೀನಪ್ಪ (50), ನಜೀರ್ ಅಹ್ಮದ್ (36) ಮೃತರೆಂದು ಗುರುತಿಸಲಾಗಿದೆ. ಕುರಿ ಮೇಕೆ ತುಂಬಿಕೊಂಡು ಮುಧೋಳದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು (Bengaluru) ಕಡೆಗೆ ಬರುತ್ತಿದ್ದ ಲಾರಿ ಗುಂಡೇನಹಳ್ಳಿ ಬಳಿ ಪಂಚರ್ ಆಗಿತ್ತು. ಇದನ್ನೂ ಓದಿ: ಕಾಶ್ಮೀರದಲ್ಲಿ ಮೇಘಸ್ಫೋಟ | ದುರಂತ ನಡೆದಾಗ ಸ್ಥಳದಲ್ಲಿ 1,200 ಜನ ಇದ್ದರು: ಬಿಜೆಪಿ ಶಾಸಕ ಬಾಂಬ್
ಲಾರಿ ಟಯರ್ ಪಂಚರ್ ಆಗಿ ರಸ್ತೆ ಬದಿ ಟಯರ್ ಬದಲಿಸುವ ವೇಳೆ, ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತೋರ್ವನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಘಟನೆಯು ನಸುಕಿನ ಜಾವ 3:30ರ ಸುಮಾರಿಗೆ ನಡೆದಿದೆ.
ಘಟನಾಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.