ನೈಸ್‌ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್‌ಗೆ ಇಬ್ಬರು ಮಹಿಳಾ ಕಾರ್ಮಿಕರು ಬಲಿ

1 Min Read

ಬೆಂಗಳೂರು: ಹಿಟ್ ಆ್ಯಂಡ್ ರನ್‌ಗೆ (Hit And Run) ಇಬ್ಬರು ಮಹಿಳಾ‌ ಕಾರ್ಮಿಕರು ಬಲಿಯಾಗಿರುವ ಘಟನೆ ಹೊಸಕೆರೆಹಳ್ಳಿ ಬಳಿ ನೈಸ್ ರಸ್ತೆಯಲ್ಲಿ ( NICE Road) ನಡೆದಿದೆ.

ಯಾದಗಿರಿ ಮೂಲದ ರಂಗಮ್ಮ (45) ಹಾಗೂ ಚೌಡಮ್ಮ (55) ಮೃತ ಕಾರ್ಮಿಕರು. ಇಬ್ಬರು ಕಾರ್ಮಿಕರು ದಿನಗೂಲಿ ಕೆಲಸ ಮಾಡಿಕೊಂಡಿದ್ದರು. ಶನಿವಾರ (ಡಿ.12) ಸಂಜೆ 5:55ರ ಸುಮಾರಿಗೆ ನೈಸ್ ರಸ್ತೆಯ ಪಕ್ಕದಲ್ಲಿರುವ ಹುಲ್ಲು ತೆರವು ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಇಬ್ಬರನ್ನು ಗುದ್ದಿಕೊಂಡು ಹೋಗಿದೆ. ಕಾರು ಗುದ್ದಿದ ರಭಸಕ್ಕೆ ಇಬ್ಬರು ಹಾರಿ ಬಿದ್ದು ಸ್ಥಳದಲ್ಲೇ ನಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪ್ರೇಮಿಗಳಿಗೆ ಸಹಕರಿಸಿದ್ದಕ್ಕೆ ಭದ್ರಾವತಿಯಲ್ಲಿ ಡಬಲ್‌ ಮರ್ಡರ್‌ – ಐವರು ಅರೆಸ್ಟ್‌

ಘಟನೆ ಬಳಿಕ ಕಾರು ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಅಪಘಾತ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಕಲಬುರಗಿ | ಕಡಕೋಳ ಜಾತ್ರೆಯಲ್ಲಿ ರಥದ ಚಕ್ರ ಕಟ್ಟಾಗಿ ಅವಘಡ

Share This Article