ಬಿಎಂಟಿಸಿ ವೋಲ್ವೋ ಬಸ್, ಲಾರಿ, ಕಾರು ನಡುವೆ ಭೀಕರ ಅಪಘಾತ – ಇಬ್ಬರು ದುರ್ಮರಣ

Public TV
1 Min Read

ಬೆಂಗಳೂರು: ಲಾರಿಗೆ ಬಿಎಂಟಿಸಿ (BMTC) ವೋಲ್ವೋ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಏರ್‌ಪೋರ್ಟ್‌ ರಸ್ತೆಯ ಮೇಲ್ಸೇತುವೆ ಮೇಲೆ ನಡೆದಿದೆ.

ಅಪಘಾತದಲ್ಲಿ (Accident) ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ. ಇನ್ನೂ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲಹಂಕ (Yelahanka) ಸಂಚಾರಿ ಪೊಲೀಸರು ಮೃತರ ಸಂಬಂಧಿಕರ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದಾರೆ.

ಯಲಹಂಕ ಮೇಲ್ಸೇತುವೆ ಮೇಲೆ ಇನೋವಾ ಕಾರಿಗೆ (Car) ಮೊದಲು ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿತ್ತು. ಇದರಿಂದ ಲಾರಿ ಚಾಲಕ ಹಾಗೂ ಕಾರಿನ ಚಾಲಕ ಇಬ್ಬರು ಬಲಭಾಗದಲ್ಲಿ ನಿಲ್ಲಿಸಿಕೊಂಡು ಗಲಾಟೆ ಮಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಿಎಂಟಿಸಿ ವೋಲ್ವೋ ಬಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಬಸ್‍ನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಬಸ್‍ನಲ್ಲಿ ಏರ್‌ಪೋರ್ಟ್‌ಗೆ ಹೋಗುವ ಒಬ್ಬರೆ ಪ್ರಯಾಣಿಕರಿದ್ದ ಕಾರಣ ಹೆಚ್ಚಿನ ಅವಘಡ ಸಂಭವಿಸಿಲ್ಲ.

ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನೋವಾ ಕಾರು, ಸಿಮೆಂಟ್ ಲಾರಿ ಹಾಗೂ ಬಸ್‍ನ್ನು ಕ್ರೇನ್ ಮೂಲಕ ತೆರವು ಮಾಡಲಾಗಿದೆ.

Share This Article