ಪಾರ್ಕ್‍ನಲ್ಲಿ ಗುಂಡಿನ ದಾಳಿ- ಇಬ್ಬರು ಬಲಿ, ಐವರಿಗೆ ಗಂಭೀರ ಗಾಯ

Public TV
1 Min Read

ವಾಷಿಂಗ್ಟನ್: ಲಾಸ್ ಎಂಜಲೀಸ್‍ನ ಉದ್ಯಾನವನದಲ್ಲಿ 2 ಗುಂಪುಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

ಕಾರ್ ಶೊನಲ್ಲಿ ಸ್ಯಾನ್ ಪೆಡ್ರೊದ ಪೆಕ್ ಪಾರ್ಕ್‍ನಲ್ಲಿ ಈ ಗುಂಡಿನ ದಾಳಿ ನಡೆದಿದೆ. ಪೆಕ್ ಪಾರ್ಕ್‍ನಲ್ಲಿ 2 ಗುಂಪುಗಳ ನಡುವೆ ನಡೆದ ವಾಗ್ವಾದ ಮಿತಿ ಮೀರಿದ್ದು, ಇದರಿಂದಾಗಿ ಗುಂಡಿನ ದಾಳಿ ನಡೆದಿದೆ.

crime

ಘಟನೆ ಸಂಬಂಧಿಸಿ ಅಲ್ಲಿನ ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದು, ಒಂದಕ್ಕಿಂತ ಹೆಚ್ಚು ಜನರು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿ ಭೀಕರ ಅಪಘಾತ: ಸ್ವಗ್ರಾಮಕ್ಕೆ ಆಗಮಿಸಿದ ಪಿಎಸ್‍ಐ ಮೃತದೇಹ

crime

ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ವರು ಪುರುಷರು ಹಾಗೂ ಮೂವರು ಮಹಿಳೆಯರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ 7 ಜನರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬಸ್‍ಗಳ ನಡುವೆ ಭೀಕರ ಅಪಘಾತ – 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *