ತೆಲುಗು ಬಿಗ್ ಬಾಸ್‌ನಲ್ಲಿ ಕನ್ನಡದ ಕಂಪು- ನಟಿಯರ ಮಾತಿಗೆ ಕನ್ನಡಿಗರು ಫಿದಾ

Public TV
1 Min Read

ತೆಲುಗಿನ ಬಿಗ್ ಬಾಸ್‌ಗೆ (Bigg Boss Telugu 7) ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shobha Shetty) ಎಂಟ್ರಿ ಕೊಟ್ಟಿರೋದು ಎಲ್ಲರಿಗೂ ಗೊತ್ತೆ ಇದೆ. ನಾಗಾರ್ಜುನ ಅಕ್ಕಿನೇನಿ ನಿರೂಪಣೆಯಲ್ಲಿ ಶೋ ಮುನ್ನುಗ್ಗುತ್ತಿದೆ. ಇದೀಗ ತೆಲುಗಿನ ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಕಲರವ ಶುರುವಾಗಿದೆ. ಕನ್ನಡದ ಕಂಪು ತೆಲುಗು ವೇದಿಕೆಯಲ್ಲಿ ಪಸರಿಸುತ್ತಿರೋದು ಕನ್ನಡಿಗರಿಗೆ ಖುಷಿ ಕೊಟ್ಟಿದೆ.‌ ಇದನ್ನೂ ಓದಿ:ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ ದರ್ಶನ್

ಈ ಬಾರಿ ವಾರಾಂತ್ಯದಲ್ಲಿ ಬಿಗ್‌ಬಾಸ್ ಮನೆಯೊಳಗೆ ಇರುವ ಸದಸ್ಯರನ್ನು ಮಾತನಾಡಿಸಲು ಕುಟುಂಬಸ್ಥರಿಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ಶೋಭಾ ಅವರ ತಂದೆ ಮಗಳ ಜೊತೆ ಮಾತನಾಡಿದಾಗ, ಶೋಭಾ ಅವರು, ಕನ್ನಡದಲ್ಲೇ ಮಾತನಾಡಿದ್ರು. ಬಳಿಕ ಪ್ರಿಯಾಂಕಾ ಜೈನ್ (Priyanka Jain) ಜೊತೆ ಮಾತನಾಡಿ, ಅವರು ಕೂಡ ಕನ್ನಡದವರು ಎಂದರು. ಆಗ ಪ್ರಿಯಾಂಕಾ, ನಿಮ್ಮನ್ನು ನೋಡಿದರೆ ನನ್ನ ಅಪ್ಪನ ನೆನಪಾಗುತ್ತದೆ ಎಂದರು. ಬಳಿಕ ಶೋಭಾ ತಂದೆ ಎಲ್ಲರಿಗೂ ಶುಭಾಶಯ ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತೆಲುಗು ಬಿಗ್‌ಬಾಸ್‌ನಲ್ಲಿಯೂ ಕನ್ನಡ ಮಾತನಾಡಿದ್ದಕ್ಕೆ ಕನ್ನಡದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂತಹದ್ದೇ ವೇದಿಕೆಯಾಗಿದ್ರು ಕನ್ನಡದ ಮರೆಯದ ನಟಿಮಣಿಯರಿಗೆ ಭೇಷ್‌ ಎಂದಿದ್ದಾರೆ ಫ್ಯಾನ್ಸ್.

ಈ ಹಿಂದೆ ಶೋಭಾ ಶೆಟ್ಟಿ, ಕನ್ನಡದ ನಟಿ ಶ್ರೀಲೀಲಾ (Sreeleela) ಅವರ ಜೊತೆ ಕನ್ನಡದಲ್ಲಿಯೇ ಮಾತನಾಡಿದ್ದರು. ಶ್ರೀಲೀಲಾ ಅವರನ್ನು ಬಿಗ್‌ಬಾಸ್ ವೇದಿಕೆಯ ಮೇಲೆ ಅತಿಥಿಯಾಗಿ ಕರೆತರಲಾಗಿತ್ತು. ಆಗ ಇವರಿಬ್ಬರೂ ಕನ್ನಡದಲ್ಲಿ ಮಾತನಾಡಿದದರು. ಹೇಗಿದ್ದೀರಾ ಎಂದೆಲ್ಲಾ ಇಬ್ಬರೂ ಕನ್ನಡದಲ್ಲಿಯೇ ಯೋಗ ಕ್ಷೇಮ ವಿಚಾರಿಸಿಕೊಂಡಿದ್ದರು. ಕನ್ನಡದವರೊಬ್ಬರು ತೆಲುಗು ಬಿಗ್‌ಬಾಸ್ ಮನೆಯೊಳಗೆ ಇರುವುದನ್ನು ಕಂಡು ಶ್ರೀಲೀಲಾ ಕರ್ನಾಟಕ ಮೀಟ್ಸ್ ಕರ್ನಾಟಕ ಎಂದು ಖುಷಿಯಿಂದ ಮಾತನಾಡಿದ್ದರು.

‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ಶೋಭಾ ತನು ಪಾತ್ರದಲ್ಲಿ ಮಿಂಚಿದ್ದರು. ಈ ಸೀರಿಯಲ್ 6 ವರ್ಷ ಪ್ರಸಾರ ಕಂಡಿತ್ತು. ಕಾವೇರಿ, ರುಕ್ಕು ಎಂಬ ಸೀರಿಯಲ್‌ನಲ್ಲಿ ನಟಿ ಅಭಿನಯಿಸಿದ್ದರು. ‘ಅಂಜನಿಪುತ್ರ’ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ತಂಗಿ ಪಾತ್ರದಲ್ಲಿ ಶೋಭಾ ನಟಿಸಿದ್ದರು.

Share This Article