ತೆಲುಗು ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಇಬ್ಬರು ಸುಂದರಿಯರು

Public TV
1 Min Read

ಟ ನಾಗಾರ್ಜುನ (Nagarjuna) ನಡೆಸಿ ಕೊಡುವ ತೆಲುಗಿನ ಬಿಗ್ ಬಾಸ್ (Bigg Boss Telugu) ಮನೆಗೆ ಇಬ್ಬರು ಕನ್ನಡತಿಯರು ಕಾಲಿಟ್ಟಿದ್ದಾರೆ. ಧಾರಾವಾಹಿ ಮತ್ತು ಕಿರುತೆರೆಯ ಮೂಲಕ ಫೇಮಸ್ ಆಗಿರೋ ಮತ್ತು ಸದ್ಯ ತೆಲುಗು ಕಿರುತೆರೆ ಪ್ರಪಂಚದಲ್ಲಿ ಬ್ಯುಸಿಯಾಗಿರೋ ಈ ಸುಂದರಿಯರು  ತೆಲುಗು ಬಿಗ್ ಬಾಸ್ ಮನೆಯಲ್ಲಿ ಕಮಾಲು ಮಾಡಲಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ರಶ್ಮಿಕಾ ಮಂದಣ್ಣರ ಕ್ಲೋಸ್ ಫ್ರೆಂಡ್ ಅನ್ನೋದು ವಿಶೇಷ.

ರಾಘು ಶಿವಮೊಗ್ಗ ನಿರ್ದೇಶನದ ಚೂರಿಕಟ್ಟೆ, ಪೆಂಟಾಗನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರೋ, ಹಲವಾರು ಧಾರಾವಾಹಿಗಳಲ್ಲೂ ನಟಿಸಿರೋ ಪ್ರೇರಣಾ ಕಂಬಂ (Prerna Kambam)ಈ ಬಾರಿ ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ. ಇವರು ರಶ್ಮಿಕಾ ಮಂದಣ್ಣರ ಕ್ಲೋಸ್ ಫ್ರೆಂಡ್. ಇಬ್ಬರೂ ಒಂದೇ ರೂಮ್ ನಲ್ಲಿ ವಾಸಿಸಿದ್ದಾಗಿ ನಾಗಾರ್ಜುನ್ ಮುಂದೆ ಹೇಳಿಕೊಂಡಿದ್ದಾರೆ.

ಪ್ರೇರಣಾ ಜೊತೆ ಕಿರುತೆರೆಯ ಮತ್ತೋರ್ವ ನಟಿ ಯಶ್ಮಿ ಗೌಡ ಕೂಡ ಸೀಸನ್ 8ರ ಸ್ಪರ್ಧಿಯಾಗಿದ್ದಾರೆ. ಪ್ರೇರಣಾ ಜೊತೆ ಯಶ್ಮಿ ಗೌಡ (Yashmi Gowda) ಬಿಗ್ ಫೈಟ್ ಕೊಡಲಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಯಶ್ಮಿ ಗೌಡ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಹುಡುಗಿಯರ ಜೊತೆ ಇನ್ನೂ ಇಬ್ಬರು ಕನ್ನಡದ ಹುಡುಗರು ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

ಈ ಸೀಸನ್ ಸಾಕಷ್ಟು ಕಾರಣಗಳಿಂದಾಗಿ ನೋಡುಗರ ಗಮನ ಸೆಳೆಯಲಿದೆ. ಕನ್ನಡದ ನಾಲ್ವರು ಈ ಬಾರಿ ಬಿಗ್ ಬಾಸ್ ತೆಲುಗು ಶೋನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕನ್ನಡದಲ್ಲಿ ಮೂಡಿ ಬಂದ ಮನೆಯೇ ಮಂತ್ರಾಲಯ ಧಾರಾವಾಹಿಯ ನಿಖಿಲ್, ವಿದ್ಯಾ ವಿನಾಯಕ ನಟಿ ಯಶ್ಮಿ ಗೌಡ, ಕನ್ನಡದ ಬಿಗ್ ಬಾಸ್ ನಲ್ಲೂ ಕಾಣಿಸಿಕೊಂಡಿದ್ದ ಪ್ರೇರಣಾ, ಪೃಥ್ವಿರಾಜ್ ಶೆಟ್ಟಿ ಹೀಗೆ ನಾಲ್ವರು ಕಲಾವಿದರು ಈ ಬಾರಿ ತೆಲುಗು ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಾರೆ.

ಕನ್ನಡದಲ್ಲಿ ಬಿಗ್ ಬಾಸ್ ಶುರುವಾಗೋ ಮುನ್ನವೇ ತೆಲುಗಿನಲ್ಲಿ ಗ್ರ್ಯಾಂಡ್ ಓಪನಿಂಗ್ ಆಗಿದೆ. 14 ಸ್ಪರ್ಧಿಗಳು ದೊಡ್ಮನೆಗೆ ಪ್ರವೇಶ ಮಾಡಲಿದ್ದಾರೆ. ಅದರಲ್ಲಿ ನಾಲ್ವರು ಕನ್ನಡದ ಮೂಲದವರೇ ಇದ್ದಾರೆ ಅನ್ನೋದು ವಿಶೇಷ. ಮುಂದಿನ ದಿನಗಳಲ್ಲಿ ಯಾವೆಲ್ಲ ಕಂಟೆಸ್ಟೆಂಟ್ ಗಳು ಗಮನ ಸೆಳೆಯುತ್ತಾರೆ ಅನ್ನೋದನ್ನ ಕಾದು ನೋಡಬೇಕು.

Share This Article