ಐಸಿಸ್ ಸೇರಲು ಯುವಕರಿಗೆ ಪ್ರಚೋದನೆ – ಇಬ್ಬರು ಉಗ್ರರ ಅರೆಸ್ಟ್

Public TV
1 Min Read

ರಾಂಚಿ: ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನು ಸೇರಲು ಪ್ರಚೋದನೆ ನೀಡುತ್ತಿದ್ದ ಇಬ್ಬರು ಉಗ್ರ ಸಂಘಟನೆಯ ಕಾರ್ಯಕರ್ತರನ್ನು ಜಾರ್ಖಂಡ್‍ನ (Jharkhand) ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ.

ಬಂಧಿತರನ್ನು ಎಮ್.ಡಿ ಆರಿಜ್ ಹುಸೇನ್ ಮತ್ತು ನಸೀಮ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಯುವಕರಿಗೆ ಐಸಿಸ್ ಸೇರಲು ಪ್ರಚೋದನೆ ನೀಡುತ್ತಿದ್ದರು. ಅಲ್ಲದೇ ಯುವಕರೊಂದಿಗೆ ಸಂಪರ್ಕ ಸಾಧಿಸಿ ಅವರನ್ನು ಉಗ್ರ ಸಂಘಟನೆಗೆ ಸೇರಲು ಸಹಕಾರ ನೀಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು

ಆರೋಪಿಗಳ ಮೊಬೈಲ್‍ನಲ್ಲಿ (Mobile) ಸಂಶಯಾಸ್ಪದ ಚಾಟಿಂಗ್‍ಗಳು ಪತ್ತೆಯಾಗಿದೆ. ಜಿಹಾದ್ ಮತ್ತು ಐಸಿಸ್ ಸಿದ್ಧಾಂತಕ್ಕೆ ಸಂಬಂಧಿಸಿದ ಎರಡು ಪುಸ್ತಕಗಳನ್ನು ಹಂಚಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಅಲ್ಲದೇ ಆರೋಪಿಗಳು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ನೆಲೆಗೊಂಡಿರುವ ಐಸಿಸ್ ಮತ್ತು ಇತರ ನಿಷೇಧಿತ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕದಲ್ಲಿರುವುದನ್ನು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆ ಹಾಗೂ ಭಯೋತ್ಪಾದನೆ ಸಂಬಂಧಿತ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ ತನಿಖೆ ಚುರುಕು – ಕಿಂಗ್‍ಪಿನ್‍ನಿಂದ ಜಾಮೀನಿನ ಮೊರೆ

Share This Article