ಮಂಡ್ಯ | ಅಂತರ ಜಿಲ್ಲಾ‌ ಖದೀಮರ ಬಂಧನ – 31 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

2 Min Read

ಮಂಡ್ಯ: ಬೈಕ್‌ಗಳಲ್ಲಿ ಬಂದು ಮಹಿಳೆಯರ ಮಾಂಗಲ್ಯ ಸರ (Mangalsutra Chain) ಅಪಹರಿಸುತ್ತಿದ್ದ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಅಂತರ ಜಿಲ್ಲಾ ಖದೀಮರನ್ನ ಮೈಸೂರಿನಲ್ಲಿ ಬಂಧಿಸಿ, 31.98 ಲಕ್ಷ ರೂ. ಮೌಲ್ಯದ ಚಿನ್ನಾಭರಣ (Jewellery) ಹಾಗೂ ಎರಡು ಬೈಕ್‌ಗಳನ್ನ ಮಂಡ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರು (Mysuru) ಶಾಂತಿನಗರದ ನಿವಾಸಿ ಸದ್ದಾಂ ಹುಸೇನ್ ಅಲಿಯಾಸ್‌ ಸದ್ದಾಂ (32), ರಾಜೀವ್ ನಗರದ ಸೈಯ್ಯದ್ ಅಯೂಬ್ (32) ಎಂಬವರೇ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 253 ಗ್ರಾಂ ಚಿನ್ನದ ಒಡವೆಗಳು, 178 ಗ್ರಾಂ ಬೆಳ್ಳಿಯ ಒಡವೆಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಪಲ್ಸರ್ ಬೈಕ್ ಮತ್ತು ಆಕ್ಸಿಸ್ ಬೈಕನ್ನ ವಶಕ್ಕೆ ಪಡೆಯಲಾಗಿದ್ದು, ಇವುಗಳ ಒಟ್ಟು ಮೌಲ್ಯ 31,98,100 ರೂ. ಎಂದು ಅಂದಾಜಿಸಲಾಗಿದೆ.

ಮಳವಳ್ಳಿ ತಾಲೂಕು ಚಿಕ್ಕೇಗೌಡನದೊಡ್ಡಿ ಗ್ರಾಮದ ಮಹದೇವ ಎಂಬವರ ಪತ್ನಿ ಎಸ್.ಸರಿತಾ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಕಿರುಗಾವಲು ಸಂತೆಮಾಳದ ಕಡೆಯಿಂದ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು 35 ಗ್ರಾಂ ತೂಕದ 2 ಎಳೆಯ ಮಾಂಗಲ್ಯ ಸರ ಕಸಿದು ಎಸ್ಕೇಪ್‌ ಆಗಿದ್ದರು ಎಂದು ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: BMRCLನಿಂದ ಗುಡ್‌ನ್ಯೂಸ್ – ಶೀಘ್ರವೇ ಟ್ರ್ಯಾಕಿಗಿಳಿಯಲಿದೆ ಪಿಂಕ್ ಲೈನ್ ಮೆಟ್ರೋ, ನಾಳೆ ರೋಲಿಂಗ್ ಸ್ಟಾಕ್ ಟೆಸ್ಟ್ ಆರಂಭ

ಈ ಸಂಬಂಧ ಆರೋಪಿಗಳನ್ನು ಪತ್ತೆಹಚ್ಚಲು ಹೆಚ್ಚುವರಿ ಎಸ್ಪಿ ಸಿ.ಈ ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ಯಶವಂತ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಅದರಂತೆ ಕಿರುಗಾವಲು ಠಾಣೆಯ ಪಿಎಸ್‌ಐ ಡಿ.ರವಿಕುಮಾರ್ ಮತ್ತು ತಂಡ ಕಾರ್ಯಾಚರಣೆ ನಡೆಸಿ ಕಳ್ಳತನ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಸದ್ದಾಂ ಹಾಗೂ ಸೈಯ್ಯದ್ ಅಯೂಬ್‌ನನ್ನು ಮೈಸೂರಿನ ರಾಜೀವ್ ನಗರದಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಹಿನ್ನೆಲೆ ಹಾಗೂ ಅಪರಾಧ ಚಟುವಟಿಕೆಗಳ ಬಗ್ಗೆ ವಿಚಾರಣೆ ಮಾಡಲಾಗಿ 1ನೇ ಆರೋಪಿ ಸದ್ದಾಂ ಹುಸೇನ್ ವಿರುದ್ಧ ಮೈಸೂರಿನಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. 2ನೇ ಆರೋಪಿ ಸೈಯ್ಯದ್ ಅಯೂಬ್ ವಿರುದ್ಧ ಶಿವಮೊಗ್ಗ, ಮೈಸೂರು, ಮಂಡ್ಯ, ಚಾಮರಾಜನಗರ, ದಾವಣಗೆರೆ ಜಿಲ್ಲೆಗಳಲ್ಲಿ 38 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ – ಗಣರಾಜ್ಯೋತ್ಸವಕ್ಕೆ ನೇಮಕಾತಿ ಪತ್ರ ವಿತರಣೆ: ಕೆ.ವೆಂಕಟೇಶ್‌

ಈ ಇಬ್ಬರು ಆರೋಪಿಗಳ ವಿರುದ್ಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ 3, ನಾಗಮಂಗಲ ಪೊಲೀಸ್ ಠಾಣೆಯಲ್ಲಿ 1, ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ 2, ಮೈಸೂರು ಹಾಗೂ ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿವೆ ಎಂದು ವಿವರಿಸಿದರು. ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸ್ ಸಿಬ್ಬಂದಿ ರಿಯಾಜ್ ಪಾಷ, ಪ್ರಭುಸ್ವಾಮಿ, ಸಿದ್ದರಾಜು, ಶ್ರೀನಿವಾಸ್, ಮಧು ಕಿರಣ್, ಎನ್.ಸಿ. ಶಿವಕುಮಾರ್, ರಫೀಕ್ ನದಾಫ್, ನಾಗೇಶ್, ರವಿಕಿರಣ್, ಲೋಕೇಶ್, ಬಿ.ಬಸವರಾಜು, ಮಹದೇವಸ್ವಾಮಿ, ನಾಗರಾಜು ಅವರು ಭಾಗವಹಿಸಿದ್ದರು. ಇದನ್ನೂ ಓದಿ: ಕೇರಳದಲ್ಲಿ ಕನ್ನಡ ಭಾಷೆಗೆ ಧಕ್ಕೆ, ಇದು ಮೊದಲೇ ಆಗಿರುವ ಮ್ಯಾಚ್‌ ಫಿಕ್ಸಿಂಗ್‌: ಆರ್‌.ಅಶೋಕ್‌

Share This Article