ಅಮಾನವೀಯ ಘಟನೆ: ರೋಗಿಯ ಪತ್ನಿಯನ್ನೇ ಆರೋಪಿಯನ್ನಾಗಿಸಿದ ಮೆಗ್ಗಾನ್ ಆಸ್ಪತ್ರೆ

Public TV
2 Min Read

ಶಿವಮೊಗ್ಗ: ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ರೋಗಿಯ ಪತ್ನಿಯನ್ನೇ ಆರೋಪಿಯನ್ನಾಗಿಸಿ ಮೆಗ್ಗಾನ್ ಆಸ್ಪತ್ರೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ.

ಹೌದು. ಅಮೀರ್ ಸಾಬ್ ಮತ್ತು ಅವರ ಪತ್ನಿ ಫಾಮಿದಾ ಅವರನ್ನೇ ಈ ಪ್ರಕರಣದಲ್ಲಿ ಆರೋಪಿಯನ್ನಾಗಿಸಿ ಮೆಗ್ಗಾನ್ ಆಸ್ಪತ್ರೆ ನಿರ್ದೇಶಕ ಸುಶೀಲ್ ಕುಮಾರ್ ಅವರು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರದಿ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾಫ್ ನರ್ಸ್‍ಗಳಾದ ಜ್ಯೋತಿ, ಚೈತ್ರಾ ಮತ್ತು ಡಿ ಗ್ರೂಪ್ ನೌಕರರಾದ ಸುವರ್ಣಮ್ಮ ಅವರನ್ನು ಅಮಾನತುಗೊಳಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆ ಡೀನ್ ಸುಶೀಲ್ ಕುಮಾರ್ ಈ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿ, ಆಸ್ಪತ್ರೆಯ ಮ್ಯಾನ್ ಪವರ್ ಏಜನ್ಸಿ ಸ್ವಿಸ್ ಮತ್ತು ಡಿಟೆಕ್ಟ್ ಎರಡೂ ಏಜನ್ಸಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ವರದಿಯಲ್ಲಿ ಏನಿದೆ?
75 ವರ್ಷದ ಅಮೀರ್ ಸಾಬ್ ಮೇ 25ರಂದು ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಗೆ ಉಸಿರಾಟದ ತೊಂದರೆ ಮತ್ತು ನಿಶ್ಯಕ್ತಿಯಿಂದ ಒಳರೋಗಿಯಾಗಿಯಾಗಿ ದಾಖಲಾಗಿದ್ದರು. ಮೇ 30ರಂದು ರೋಗಿಗೆ ಅಬ್ಡೋಮಿನಲ್ ಆಲ್ಟ್ರಾಸೌಂಡ್ ಮಾಡಿಸಲು ವೈದ್ಯರು ಸೂಚಿಸಿದ್ದರು. ಮೇ 31ರಂದು ಮಧ್ಯಾಹ್ನ 12.30ಕ್ಕೆ ರೋಗಿಯ ಪತ್ನಿ ವೀಲ್ ಚಯರ್ ಇರುವುದಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆಸ್ಪತ್ರೆಯ ವಾರ್ಡ್ ನಿಂದ ಹೊರಗೆ ಸ್ಕ್ಯಾನಿಂಗ್ ಗೆ ಎಳೆದು ತಂದಿದ್ದಾರೆ. ಈ ದೃಶ್ಯವನ್ನು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ವಾಟ್ಸಪ್ ಮಾಡಿ ಹರಿಬಿಟ್ಟಿದ್ದಾರೆ.

ನಮ್ಮ ಆಸ್ಪತ್ರೆಯಲ್ಲಿ ವೀಲ್ ಚೇರ್, ಸ್ಟ್ರಚ್ಚರ್‍ಗಳು ಹಾಗೂ ರೋಗಿಗಳನ್ನು ಸಾಗಿಸುವ ಸಲಕರಣೆಗಳು ಸಾಕಷ್ಟಿದೆ. ರೋಗಿಗೆ ಚಿಕಿತ್ಸೆ ನೀಡುವುದರಲ್ಲಿ ಹಾಗೂ ಆರೈಕೆ ಮಾಡಿರುವುದಲ್ಲಿ ಆಸ್ಪತ್ರೆ ಸಿಬ್ಬಂದಿಯಿಂದ ಯಾವುದೇ ಕುಂದು ಕೊರತೆ ಆಗಿಲ್ಲ. ಈ ಘಟನೆ ವೇಳೆ ವಾರ್ಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿ ದರ್ಜೆಯ ನೌಕರಳಾದ ಸುವರ್ಣಮ್ಮ, ಹಾಗೂ ಇಬ್ಬರು ನರ್ಸ್ ಗಳನ್ನು ಅಮಾನತುಗೊಳಿಸಿ ವಿಚಾರಣೆಯನ್ನು ಮುಂದುವರಿಸಲಾಗುತ್ತದೆ ಎಂದು ವರದಿ ನೀಡಿದ್ದಾರೆ.

ಫಾಮಿದಾ ಹೇಳಿದ್ದು ಏನು?
ಎರಡನೇ ಮಳಿಗೆಯಲ್ಲಿದ್ದ ಈ ಪತಿ ಅಮೀರ್ ಸಾಬ್ ಅವರನ್ನು ಕೆಳಗಡೆ ಕರೆದುಕೊಂಡು ಹೋಗಲು ಗಾಲಿ ಕುರ್ಚಿ ಕೇಳಿದ್ದೆ. ಅದರೆ ಅಲ್ಲಿದ್ದ ಸಿಬ್ಬಂದಿ ಗಾಲಿ ಕುರ್ಚಿ ನೀಡಲೇ ಇಲ್ಲ. ಒಂದು ವೇಳೆ ಇವತ್ತು ಎಕ್ಸ್ ರೇ ತೆಗೆಸದಿದ್ದರೆ ತೊಂದರೆ ಆದೀತು ಎಂದು ನಾನೇ ಗಂಡನನ್ನು ನೆಲದಲ್ಲಿ ಎಳೆದುಕೊಂಡು ಹೋಗಿದ್ದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಬಿಎಸ್‍ವೈ

ಇದನ್ನೂ ಓದಿ: ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿ ಉಡಾಫೆಯ ಉತ್ತರ ನೀಡಿದ ಸಿಎಂ

 

https://www.youtube.com/watch?v=FIfROhD1LVc

Share This Article
Leave a Comment

Leave a Reply

Your email address will not be published. Required fields are marked *