ಕೆರೆಯಲ್ಲಿ ಕಾಲುಜಾರಿ ಬಿದ್ದು ಬಾಲಕಿಯರಿಬ್ಬರ ಸಾವು

Public TV
1 Min Read

ಬೆಳಗಾವಿ: ದೀಪಾವಳಿ ಹಬ್ಬದ ಪೂಜಾ ಸಾಮಗ್ರಿಯನ್ನು ಕೆರೆಗೆ ವಿಸರ್ಜಿಸಲು ತೆರಳಿದ್ದ ಸೋದರಿಯರು ಕಾಲುಜಾರಿ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.

ಸಾಂಬ್ರಾ ನಿವಾಸಿ ನೇತ್ರಾ ಕೊಳವಿ(8), ಪ್ರಿಯಾ ಕೊಳವಿ(6) ಮೃತಪಟ್ಟ ಬಾಲಕಿಯರು. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ದೀಪಾವಳಿ ಪೂಜೆಯಲ್ಲಿ ಬಳಸಿದ ಸಾಮಾಗ್ರಿಯನ್ನು ವಿಸರ್ಜನೆ ಮಾಡುವ ನೆಪದಲ್ಲಿ ಹಿರಿಯ ಸಹೋದರಿ 10 ವರ್ಷದ ಸಂಧ್ಯಾ ಜೊತೆ ಬಾಲಕಿಯರು ಕೆರೆಗೆ ತೆರಳಿದ್ದರು. ಈ ವೇಳೆ ಬಾಳೆ ಗಿಡ ಕೆರೆಗೆ ಎಸೆಯುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಗೆದ್ದು ಬಂದವರು ತಮ್ಮ ಕಥೆಗಳನ್ನು ಹೇಳಬೇಕು: ಮನಿಷಾ ಕೊಯಿರಾಲಾ

ಸ್ಥಳೀಯರ ಸಹಾಯದಿಂದ ಇಬ್ಬರು ಬಾಲಕಿಯರ ಮೃತದೇಹವನ್ನು ಕೆರೆಯಿಂದ ಹೊರಕ್ಕೆ ತೆಗೆಯಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *