ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

Public TV
1 Min Read

ಮಂಗಳೂರು: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಮಂಗಳೂರು (Mangaluru) ಹೊರವಲಯದ ಸುರತ್ಕಲ್‌ನ (Surathkal) ಎನ್‌ಐಟಿಕೆ ಬೀಚ್‌ನಲ್ಲಿ (NITK Beach) ನಡೆದಿದೆ.

ಧ್ಯಾನ್ ಬಂಜನ್(18), ಹನೀಶ್ ಕುಲಾಲ್(15) ಸಮುದ್ರಪಾಲಾದ ಬಾಲಕರು. ಇದನ್ನೂ ಓದಿ: ಬ್ರಾಹ್ಮಣರ ಸಂಖ್ಯೆ 15 ಲಕ್ಷ ಅಲ್ಲ, ನಮ್ಮ ಸಂಖ್ಯೆ 45 ಲಕ್ಷ: ಅಶೋಕ್ ಹಾರನಹಳ್ಳಿ

ಬುಧವಾರ ಸೂರಿಂಜೆಯ ಕುಟುಂಬವೊಂದರ ಮನೆಯಲ್ಲಿ ವಿವಾಹ ಕಾರ್ಯಕ್ರಮವಿದ್ದುದರಿಂದ ಕುಟುಂಬದ ಸದಸ್ಯರು ಮುಂಬೈನಿAದ ಬಂದಿದ್ದರು. ಮದುಮಗಳ ಸಹೋದರನ ಜೊತೆಗೆ ಹತ್ತು ಮಂದಿ ಸಂಜೆ ಬೀಚ್‌ಗೆ ತೆರಳಿದ್ದರು. ಈ ವೇಳೆ ಬಾಲಕರಿಬ್ಬರು ಸಮುದ್ರ ಪಾಲಾಗಿದ್ದಾರೆ. ಇದನ್ನೂ ಓದಿ: Haveri | ಬಿರುಗಾಳಿ ಸಹಿತ ಮಳೆ – 20ಕ್ಕೂ ಅಧಿಕ ಮರಗಳು ಧರಾಶಾಹಿ, ಕಾರುಗಳು ಜಖಂ

ತಕ್ಷಣ ಲೈಫ್ ಗಾರ್ಡ್‌ಗಳು ಧ್ಯಾನ್‌ನನ್ನ ರಕ್ಷಿಸಿದರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಹನೀಶ್ ಸಮುದ್ರ ಪಾಲಾಗಿದ್ದು, ಈಜುಗಾರರ ತಂಡದಿಂದ ಹುಡುಕಾಟ ನಡೆಯುತ್ತಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article