ಗ್ರಾ.ಪಂ ಸದಸ್ಯನ ಮನೆ ದರೋಡೆ ಕೇಸ್; ಇಬ್ಬರು ಅರೆಸ್ಟ್

Public TV
1 Min Read

– 13 ಲಕ್ಷ ಮೌಲ್ಯದ 162 ಗ್ರಾಂ ಚಿನ್ನಾಭರಣ, 5.65 ಲಕ್ಷ ರೂ. ನಗದು ವಶಕ್ಕೆ

ರಾಮನಗರ: ಮನೆ ಬಾಗಿಲು ಮುರಿದು ಗ್ರಾ.ಪಂ ಸದಸ್ಯನ ಮನೆ ದರೋಡೆ ಮಾಡಿದ್ದ ಇಬ್ಬರು ಖದೀಮರನ್ನ ಬಂಧಿಸುವಲ್ಲಿ ಮಾಗಡಿ ಪೊಲೀಸರು (Magadi Police) ಯಶಸ್ವಿಯಾಗಿದ್ದಾರೆ.

ಸಾವನದುರ್ಗದ ನರಸಿಂಹ ನಾಯಕ್ (34), ಕೆಬ್ಬೆದೊಡ್ಡಿಯ ಕುಮಾರ್ ನಾಯಕ್ (42) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ಹಣ ಕಳೆದುಕೊಂಡ 80ರ ವೃದ್ಧ

ಮಾಗಡಿ ತಾಲೂಕಿನ ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯನ ಮನೆಯಲ್ಲಿ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ದೋಚಲಾಗಿತ್ತು. ಈ ಬಗ್ಗೆ ಮನೆ ಮಾಲೀಕ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನ ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳವನ್ನು ಕಬಳಿಸಲು ಸರ್ಕಾರ ಈಗ ಸಾಕ್ಷಿ ಹುಡುಕುತ್ತಿದೆ: ಪ್ರತಾಪ್‌ ಸಿಂಹ

ಬಂಧಿತ ಆರೋಪಿಗಳಿಂದ 13 ಲಕ್ಷ ಮೌಲ್ಯದ 162 ಗ್ರಾಂ ಚಿನ್ನಾಭರಣ ಹಾಗೂ 5.65 ಲಕ್ಷ ರೂ. ನಗದನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article