ತಲ್ವಾರ್‌ ಹಿಡಿದು ಡ್ಯಾನ್ಸ್‌ – ರೀಲ್ಸ್‌, ಲೈಕ್‌ ಮಾಡಿದ ಇಬ್ಬರಿಗೂ ಬಿಸಿ ಮುಟ್ಟಿಸಿದ ಪೊಲೀಸರು

1 Min Read

ಮಂಗಳೂರು: ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿದ ರೀಲ್ಸ್‌ನ್ನು‌ (Reels) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಲೈಕ್ ಮಾಡಿದ ಇಬ್ಬರನ್ನು ಮಂಗಳೂರು (Mangaluru) ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರಿನ ಬಂದರು ನಿವಾಸಿ ಅಮೀರ್ ಸುಹೇಲ್ ಹಾಗೂ ಕಾವೂರು ನಿವಾಸಿ ಸುರೇಶ್ ಎಂದು ಗುರುತಿಸಲಾಗಿದೆ. ಡಿ.13 ರಂದು ಅಮೀರ್ ಸುಹೇಲ್ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ. ಈ ರಿಲ್ಸ್‌ನ್ನು ಸುರೇಶ್ ಲೈಕ್ ಮಾಡಿ ಶೇರ್ ಮಾಡಿದ್ದ. ಈ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಭಯ ಹುಟ್ಟಿಸಿದ ಹಿನ್ನಲೆಯಲ್ಲಿ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಇದನ್ನೂ ಓದಿ: ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಸಿಕ್ತು ಕೈದಿಗಳ ಬಳಿ ಮೊಬೈಲ್

ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 352(2), 4, 25(1ಬಿ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, ಕಲಂ 66 ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಂದ ತಲ್ವಾರ್ ಹಾಗೂ ವಿಡಿಯೋ ಪೋಸ್ಟ್‌ಗೆ ಬಳಸಿದ ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: Bondi Beach Attack – ನನ್ನ ಮಗ ಒಳ್ಳೆಯವ್ನು, ಅವನಂತ ಮಗನ್ನ ಪಡೆಯೋಕೆ ಜನ ಬಯಸ್ತಾರೆ: ನವೀದ್ ತಾಯಿಯ ಸಮರ್ಥನೆ!

Share This Article