ಚಿತ್ರದುರ್ಗ: ನಕಲಿ ಚಿನ್ನ (Gold) ನೀಡಿ 35 ಲಕ್ಷ ರೂ. ವಂಚಿಸಿದ್ದ ಇಬ್ಬರು ಆರೋಪಿಗಳನ್ನು (Chitradurga) ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ದಾವಣಗೆರೆ ಮೂಲದ ರಮೇಶ್ ಹಾಗೂ ವಿಜಯನಗರ ಮೂಲದ ರಾಮಕೃಷ್ಣ ಎಂದು ಗುರುತಿಸಲಾಗಿದೆ. ಇಬ್ಬರು ಸೇರಿ ತಮಿಳುನಾಡು ಮೂಲದ ಕೆ.ಪಾಂಡಿ ಎಂಬವರಿಗೆ 2ಕೆಜಿ ಚಿನ್ನ ಕೊಡುವುದಾಗಿ 35ಲಕ್ಷ ರೂ. ಪಡೆದು, ನಕಲಿ ಚಿನ್ನ ನೀಡಿ ವಂಚಿಸಿದ್ದರು. ಇದನ್ನೂ ಓದಿ: ಜೈಲಲ್ಲಿರೊ ಉಗ್ರ ನಾಸೀರ್‌ಗೆ ಮನೋವೈದ್ಯನಿಂದ ಮೊಬೈಲ್ ಸಪ್ಲೈ – ಶಂಕಿತ ಉಗ್ರರು 6 ದಿನ ಎನ್ಐಎ ಕಸ್ಟಡಿಗೆ
ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರಿಂದ 22ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ವಿಜಯಪುರ | ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ